ವೀಕೆಂಡ್ ಸ್ಪೆಷಲ್ ➤ ಚಿಕನ್ ಬಿರಿಯಾನಿ ಮಾಡುವ ವಿಧಾನ.!

(ನ್ಯೂಸ್ ಕಡಬ)newskadaba.com ಬೇಕಾಗುವ ಸಾಮಗ್ರಿ

ಚಿಕನ್ ಅರ್ಧ ಕೆಜಿ ಚಕ್ಕೆ

1 ಲವಂಗ

3 ಟೊಮೆಟೊ 2

2 ಗೋಡಂಬಿ,

2 ಬಾದಾಮಿ

ಈರುಳ್ಳಿ 1

ಖಾರದ ಪುಡಿ 11/2 ಚಮಚ

ಕೊತ್ತಂಬರಿ ಪುಡಿ 1 ಚಮಚ

ಗರಂ ಮಸಾಲ 1/2 ಚಮಚ

ಅರಿಶಿಣ ಪುಡಿ 1/4 ಚಮಚ

ಬಿರಿಯಾನಿ ಮಸಾಲೆ 1 ಚಮಚ

ಪಲಾವ್ ಎಲೆ 1 ಗಟ್ಟಿ ಮೊಸರು 1/4 ಕಪ್

ರುಚಿಗೆ ತಕ್ಕ ಉಪ್ಪು

ಬಾಸುಮತಿ ಅಕ್ಕಿ 1ಕಪ್

ಮಾಡುವ ವಿಧಾನ:

ಈರುಳ್ಳಿ, ಟೊಮೆಟೊ, ಗೋಡಂಬಿ, ಬಾದಾಮಿ ಪೇಸ್ಟ್ ಮಾಡಿ ಇಟ್ಟು, ಬಾಸುಮತಿ ಅಕ್ಕಿಯನ್ನು ತೊಳೆದು 10 ನಿಮಿಷ ಇಡಿ, ನಂತರ ಬೇಯಲು ತಕ್ಕ ನೀರು ಹಾಕಿ 1 ವಿಶಲ್‌ ಬರುವವರೆಗೆ ಬೇಯಿಸಿ, ಹಾಗೇ ಪಾತ್ರೆಯಲ್ಲಿ ಬೇಯಿಸುವುದಾರೆ ಅನ್ನ ಬೇಯಲು 5 ನಿಮಿಷ ಇರುವಾಗ ಬಸಿಯಿರಿ. ದಪ್ಪ ತಳವಿರುವ ಪಾತ್ರೆಗೆ ಒಂದು ಚಮಚ ತುಪ್ಪ ಹಾಕಿ, ಎಣ್ಣೆ ಬಿಸಿಯಾದಾಗ ಪಲಾವ್‌ ಎಲೆ ಹಾಕಿ, ಅದಕ್ಕೆ ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹಾಕಿ, ನಂತರ ಟೊಮೆಟೊ, ಈರುಳ್ಳಿ , ಗೋಡಂಬಿ, ಬಾದಾಮಿ, ಪೇಸ್ಟ್ ಹಾಕಿ ತುಪ್ಪ ಮೇಲ್ಭಾಗದಲ್ಲಿ ತೇಲುವವರೆಗೆ ಕಡಿಮೆ ಉರಿಯಲ್ಲಿ ಫ್ರೈ ಮಾಡಿ, ಈಗ ಖಾರದ ಪುಡಿ, ಕೊತ್ತಂಬರಿ ಪುಡಿ, ಗರಂ ಮಸಾಲ ಪುಡಿ, ಸ್ವಲ್ಪ ಬಿರಿಯಾನಿ ಮಸಾಲ ಹಾಕಿ ಚಿಕನ್ ಹಾಕಿ , ರುಚಿಗೆ ತಕ್ಕ ಉಪ್ಪು ಸೇರಿಸಿ ಕಡಿಮೆ ಉರಿಯಲ್ಲಿ ಬೇಯಿಸಿ. ಚಿಕನ್ ಮುಕ್ಕಾಲು ಭಾಗ ಬೆಂದಾಗ ಮೊಸರು ಹಾಕಿ, ಪಾತ್ರೆಯ ಬಾಯಿ ತೆರೆದು ಬೇಯಿಸಿ, ಚಿಕನ್ ಸೆಮಿ ಡ್ರೈ ರೀತಿಯಾದಾಗ ಕೊತ್ತಂಬರಿ ಸೊಪ್ಪು ಕತ್ತರಿಸಿ ಹಾಕಿ, ಈಗ ಅದೇ ಪಾತ್ರೆಗೆ ಮುಕ್ಕಾಲು ಭಾಗ ಬೆಂದ ಅನ್ನ ಹಾಕಿ ಪಾತ್ರೆಯ ಬಾಯಿ ಮುಚ್ಚಿ ಕಡಿಮೆ ಉರಿಯಲ್ಲಿ 10 ನಿಮಿಷ ಬೇಯಿಸಿ. ನಂತರ ಮಿಕ್ಸ್ ಮಾಡಿದರೆ ರುಚಿಕರವಾದ ಚಿಕನ್ ಬಿರಿಯಾನಿ ರೆಡಿ.

error: Content is protected !!
Scroll to Top