23 ವರ್ಷದ ಯುವತಿಯನ್ನು ಪ್ರೀತಿಸಿ ಮದುವೆಯಾದ 6 ಮಕ್ಕಳ ತಂದೆ

(ನ್ಯೂಸ್ ಕಡಬ)newskadaba.com ಉತ್ತರ ಪ್ರದೇಶ, ಫೆ.06. 6 ಮಕ್ಕಳ ತಂದೆಯೊಬ್ಬ 23 ವರ್ಷದ ಯುವತಿಯನ್ನು ಪ್ರೀತಿಸಿ ಮದುವೆಯಾದ ಘಟನೆ ನಡೆದಿದ್ದು, ಕಳೆದ ಕೆಲ ವರ್ಷಗಳಿಂದ, ಪತ್ನಿ ನಿಧನದ ಬಳಿಕ ಒಂಟಿ ಜೀವನವನ್ನು ನಡೆಸುತ್ತಿದ್ದು, ತನ್ನ 6 ಹೆಣ್ಣು ಮಕ್ಕಳೊಂದಿಗೆ ವಾಸಿಸುತ್ತಿರುವ 65 ವರ್ಷದ ನಖೇಶ್‌ ಯಾದವ್‌ ಈಗ ಎಲ್ಲರ ಸಮ್ಮುಖದಲ್ಲಿ 23 ವರ್ಷದ ನಂದಿನಿ ಯಾದವ್‌ ಎಂಬ ಯುವತಿಯನ್ನು ಮದುವೆಯಾಗಿದ್ದಾರೆ ಎನ್ನಲಾಗಿದೆ.

ಇತ್ತೀಚೆಗೆ ವೈಯಕ್ತಿಕ ಕೆಲಸದ ನಿಮಿತ್ತ ರಾಂಚಿಗೆ ಹೋಗಿದ್ದ ವೇಳೆ ಅಲ್ಲಿ ಯುವತಿಯ ಪರಿಚಯವಾಗಿ ದಿನ ಕಳೆದಂತೆ ಪ್ರೇಮಕ್ಕೆ ತಿರುಗುತ್ತದೆ. ಇದೀಗ ಇಬ್ಬರು ಮಕ್ಕಳ, ಕುಟುಂಬಸ್ಥರ ಸಮ್ಮುಖದಲ್ಲಿ ಸಪ್ತಪದಿ ತುಳಿದಿದ್ದಾರೆ ಎಂದು ತಿಳಿದುಬಂದಿದೆ.

Also Read  ಬಂಟ್ವಾಳ: ಅನಾರೋಗ್ಯದಿಂದ ಹಿಂದೂ ಸಂಘಟನೆಯ ಯುವಕ ಮೃತ್ಯು

 

error: Content is protected !!
Scroll to Top