ಕೆಂಪೇಗೌಡ ಏರ್‌ಪೋರ್ಟ್‌ಗೆ ಬಾಂಬ್‌ ಬೆದರಿಕೆ ➤  ಓರ್ವ ಮಹಿಳೆ ಅರೆಸ್ಟ್..!

(ನ್ಯೂಸ್ ಕಡಬ)newskadaba.com ಬೆಂಗಳೂರು, ಫೆ. 06. ‘ನಾನು ಕೊಲ್ಕತ್ತಾಗೆ ತುರ್ತಾಗಿ ಹೋಗಬೇಕು. ಇಲ್ಲವಾದರೆ, ಬಾಂಬ್‌ ಹಾಕಿ ಏರ್‌ಪೋರ್ಚ್‌ ಸ್ಫೋಟಿಸುತ್ತೇನೆ’ ಎಂದು ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಲ ಕಾಲ ರಂಪಾಟ ಮಾಡಿದ ಮಹಿಳೆಯನ್ನು ಕೆಐಎ ಠಾಣೆ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

ಕೇರಳ ರಾಜ್ಯದ ಕಾಜಿಕೋಡ್‌ ಮೂಲದ ಮಾನಸಿ ಸತೇಬೈನು(31) ಜೈಲು ಪಾಲಾದವರು. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಕೇಂದ್ರ ಕೈಗಾರಿಕಾ ಭದ್ರ ತಾ ಪಡೆಯ (ಸಿಐಎಸ್‌ಎಫ್‌) ಸಿಬ್ಬಂದಿ ಸಂದೀಪ್‌ ಸಿಂಗ್‌ ಅವರು ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Scroll to Top