(ನ್ಯೂಸ್ ಕಡಬ)newskadaba.com ದಾವಣಗೆರೆ, ಫೆ.04. ತಾಪಮಾನ ಹೆಚ್ಚಳದ ಜತೆ ಪ್ರತಿದಿನ ಬದಲಾಗುತ್ತಿರುವ ಹವಾಮಾನ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಈಗ ರಾಜ್ಯದೆಲ್ಲೆಡೆ ಮಕ್ಕಳು ವಾಂತಿ-ಭೇದಿ, ಜ್ವರ, ಶೀತ, ಕೆಮ್ಮು, ನೆಗಡಿ ಹಾಗೂ ಕಫದ ಸಮಸ್ಯೆಗೆ ತುತ್ತಾಗುತ್ತಿದ್ದಾರೆ.
ಈ ಬಾರಿ ಹವಮಾನ ಸ್ಥಿರವಾಗಿಲ್ಲ, ಬೆಳಗ್ಗೆ ಮೈ ಕೊರೆಯುವ ಚಳಿಯಿದ್ದರೆ, ಮಧ್ಯಾಹ್ನ ಬೆವರ ಬಸಿಯುವ ಬಿಸಿಲು ಇರುತ್ತದೆ. ಹಾಸನ, ಮಡಿಕೇರಿ ಜಿಲ್ಲೆಗಳಲ್ಲಿ ಅಕಾಲಿಕ ಮಳೆಯಾಗಿದೆ. ಬೆಂಗಳೂರು, ಹಳೇ ಮೈಸೂರು ಭಾಗದಲ್ಲಿ ಚಳಿ ಇನ್ನೂ ಕಡಿಮೆ ಆಗಿಲ್ಲ. ಮಧ್ಯ ಕರ್ನಾಟಕ ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ ಬೇಸಿಗೆ ಕಾಲೂರುತ್ತಿದೆ. ರಾಜ್ಯದ ಸರಾಸರಿ ತಾಪಮಾನ 32 ಡಿಗ್ರಿಯಿದ್ದು, ಕೆಲವೇ ದಿನಗಳಲ್ಲಿ 36 ಡಿಗ್ರಿಗೆ ಮುಟ್ಟಲಿದೆ ಎಂದು ಹವಮಾನ ತಜ್ಞರು ಹೇಳುತ್ತಿದ್ದಾರೆ.