ಕಾರ್ ಢಿಕ್ಕಿಯಾಗಿ ಬಂಪರ್ ನೊಳಗೆ ನಾಯಿ ಪ್ರತ್ಯಕ್ಷ

(ನ್ಯೂಸ್ ಕಡಬ)newskadaba.com ಮಂಗಳೂರು, ಫೆ.03. ಕಾರ್​ಗೆ ಡಿಕ್ಕಿಯಾದ ನಾಯಿಯೊಂದು ಬಂಪರ್​ನೊಳಗೆ ಪತ್ತೆಯಾದ ವಿಚಿತ್ರ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದಿದೆ. ಡಿಕ್ಕಿಯಾದ ಬಳಿಕ ಬಂಪರ್​​ನೊಳಗೆ ಕುಳಿತ ನಾಯಿ ಸುಮಾರು 70 ಕಿಲೋ ಮೀಟರ್ ಪ್ರಯಾಣಿಸಿದೆ. ಆದ್ರೆ ಇದ್ಯಾವ ವಿಷಯ ಕಾರ್​ ಚಾಲಕನಿಗೆ ಗೊತ್ತಾಗಿಲ್ಲ. ಪುತ್ತೂರಿನ ಕಬಕ ನಿವಾಸಿ ಸುಬ್ರಹ್ಮಣ್ಯ ಟಿ.ಎಸ್ ಅವರಿಗೆ ಸೇರಿದ ಕಾರ್​​ ಬಂಪರ್​ನೊಳಗೆ ನಾಯಿ ಸೇರಿಕೊಂಡಿತ್ತು. ಸುಬ್ರಹ್ಮಣ್ಯ ಟಿ.ಎಸ್. ಕುಟುಂಬ ಸುಬ್ರಹ್ಮಣ್ಯದಿಂದ ಪುತ್ತೂರಿಗೆ ಬರುವ ಮಾರ್ಗದಲ್ಲಿ ಈ ಘಟನೆ ನಡೆದಿದೆ.


ಸುಬ್ರಹ್ಮಣ್ಯ-ಪುತ್ತೂರು ರಸ್ತೆಯ ಬಳ್ಪ ಎಂಬಲ್ಲಿ ಕಾರ್​​ಗೆ ನಾಯಿ ಡಿಕ್ಕಿ ಹೊಡೆದಿತ್ತು. ಕೂಡಲೇ ಕಾರ್ ನಿಲ್ಲಿಸಿದ ಸುಬ್ರಹ್ಮಣ್ಯ ಕೆಳಗಿಳಿದು ನೋಡಿದ್ದಾರೆ. ಆದರೆ ನಾಯಿ ಎಲ್ಲಿಯೂ ಕಂಡಿಲ್ಲ. ನಾಯಿ ಹೋಗಿರಬಹುದು ಎಂದು ತಿಳಿದು ಕಾರ್ ಚಲಾಯಿಸಿಕೊಂಡು ಮನೆಗೆ ಹಿಂದಿರುಗಿದ್ದಾರೆ.

Also Read  ನಿಯಮ ಪಾಲಿಸದವರ ಲೈಸೆನ್ಸ್ ರದ್ದುಗೊಳಿಸಿ- ಸಾರಿಗೆ ಸಚಿವರಿಗೆ ಸಿಎಂ ಸೂಚನೆ

 

error: Content is protected !!
Scroll to Top