ಉಳ್ಳಾಲ: ಸಮುದ್ರ ತೀರದಲ್ಲಿ ಟ್ರಾಲ್‌ಬೋಟ್ ಅವಘಡ.! ➤ 8 ಮೀನುಗಾರರ ರಕ್ಷಣೆ

(ನ್ಯೂಸ್ ಕಡಬ)newskadaba.com ಉಳ್ಳಾಲ, ಫೆ.03. ಸಮುದ್ರ ತೀರದಿಂದ ಸುಮಾರು 12.5 ನಾಟಿಕಲ್ ದೂರದಲ್ಲಿ ಟ್ರಾಲ್‌ ಬೋಟ್‌ವೊಂದು ಅವಘಡಕ್ಕೀಡಾಗಿದ್ದು, ಭಾರೀ ನಷ್ಟ ಸಂಭವಿಸಿರುವ ಘಟನೆ ಉಳ್ಳಾಲದಲ್ಲಿ ನಡೆದಿದ್ದು, ಬೋಟಿನಲ್ಲಿದ್ದ 8 ಮಂದಿ ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಬಾಲಕೃಷ್ಣ ಎಂಬವರ ಮಾಲಕತ್ವದ ಜಲ-ಮಾತಾ ಬೋಟು ಮೀನುಗಾರಿಕೆಗೆ ತೆರಳುತ್ತಿದ್ದಾಗ ಹಡಗಿನ ಅವಶೇಷಗಳಿಗೆ ತಾಗಿ ಜಖಂಗೊಂಡಿದೆ ಎನ್ನಲಾಗಿದೆ. ಇನ್ನು ತಕ್ಷಣ ಹತ್ತಿರದಲ್ಲೇ ಇದ್ದ ಲಲಿತಾ ಸಾಗರ ಎಂಬ ಹೆಸರಿನ ಬೋಟಿನಲ್ಲಿದ್ದ ಮೀನುಗಾರರು ಅಪಾಯಕ್ಕೆ ಸಿಲುಕಿದ್ದ ಮೀನುಗಾರರನ್ನು ರಕ್ಷಿಸಿದ್ದಾರೆ. ಈ ಕುರಿತು ಕರಾವಳಿ ಕಾವಲು ಪಡೆಯ ಠಾಣೆಗೆ ದೂರು ನೀಡಲಾಗಿದೆ.Powered By

 

error: Content is protected !!

Join the Group

Join WhatsApp Group