ಕೆಲಸ ಕೊಡಿಸ್ತೀವಿ ಅಂತಾ ಕರೆದು ಸುಲಿಗೆ ಮಾಡಿದ್ದ ಗ್ಯಾಂಗ್​ ಅರೆಸ್ಟ್..!

crime, arrest, suspected

(ನ್ಯೂಸ್ ಕಡಬ)newskadaba.com ಬೆಂಗಳೂರು, ಫೆ.03. ಕೆಲಸ ಕೊಡಿಸುತ್ತೇವೆ ಅಂತ ಕರೆದು ಸುಲಿಗೆ ಮಾಡಿದ್ದ ಗ್ಯಾಂಗ್​ನ್ನು ಕೊಡಿಗೆಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆಂಧ್ರಪ್ರದೇಶ ಮೂಲದ ಮಲ್ಲು ಶಿವಶಂಕರ ರೆಡ್ಡಿ, ಗುಂಜ ಮಂಗರಾವ್, ಶೇಕ್ ಶಹಬಾಜಿ, ಮಹೇಶ್ ಬಂಧಿತ ಆರೋಪಿಗಳು. ಗ್ಯಾಂಗ್ ಸಾಮಾಜಿಕ ಜಾಲತಾಣದ ಮೂಲಕ ಕೆಲಸ ಕೊಡಿಸುತ್ತೇವೆ ಎಂದು ಜಾಹಿರಾತು ನೀಡಿದೆ. ಇದನ್ನು ನಂಬಿದ್ದ ಆಂಧ್ರಪ್ರದೇಶದ ಪ್ರದೀಪ್ ಅಸಾಮ್ವರ್​​ಗೆ ಆರೋಪಿ ಮಲ್ಲು ಶಿವಶಂಕರ್ ರೆಡ್ಡಿ ಫೇಸ್ ಬುಕ್​ ಮುಖಾಂತರ ಪರಿಚಯವಾಗಿದ್ದನು. ನಂತರ ಖಾಸಗಿ ಕಂಪನಿಯಲ್ಲಿ ಕೆಲಸ ಕೊಡಿಸುತ್ತೇನೆಂದು ನಂಬಿಸಿ, ಆಂದ್ರದಿಂದ ಬೆಂಗಳೂರಿಗೆ ಬರುವಂತೆ ಆರೋಪಿ ಹೇಳಿದ್ದನು ಎನ್ನಲಾಗಿದೆ.

ಪ್ರದೀಪ್ ಅಸಾಮ್ವರ್ ಹೆಬ್ಬಾಳ ಬಳಿ ಬಂದು ಇಳಿದಿದ್ದನು. ಹೆಬ್ಬಾಳನಲ್ಲಿ ಪ್ರದೀಪ್ ಅಸಾಮ್ವರ್​​ನನ್ನು ಸ್ವಿಫ್ಟ್ ಕಾರಿನಲ್ಲಿ ಬಂದು ನಾಲ್ವರು ಪಿಕ್ ಮಾಡಿಕೊಂಡಿದ್ದಾರೆ. ಈ ವೇಳೆ ಪ್ರದೀಪ್ ಅಸಾಮ್ವರ್ ಕಾರಿನ ಫೋಟೊ ತೆಗೆದುಕೊಂಡಿದ್ದನು. ಪ್ರದೀಪ್​​ನ​ನ್ನು ಕಾರಿನಲ್ಲಿ ಕೂರಿಸಿಕೊಂಡಿದ್ದ ಗ್ಯಾಂಗ್​ ಮ್ಯಾನೆಜರ್ ಭೇಟಿ ಮಾಡಿಸ್ತೇವೆ ಎಂದು ಕರೆದೊಯ್ದಿದ್ದಾರೆ. ಹೀಗೆ ಕಾರಿನಲ್ಲಿ ಹೋಗುವಾಗ ಪ್ರದೀಪ್, ಶಿವಶಂಕರ್ ರೆಡ್ಡಿ ಜೊತೆಗೆ ಬಂದಿದ್ದವರ ಹೆಸರು ಕೇಳಿದ್ದಾನೆ. ಆಗ ಆರೋಪಿ ಶಿವಶಂಕರ್​ ರೆಡ್ಡಿ ಹೆಸರು ಹೇಳದಿದ್ದಾಗ ಆತನಿಗೆ ಅನುಮಾನ ಬಂದಿದೆ ಎಂದು ವರದಿ ತಿಳಿಸಿದೆ.

Also Read  ಉಡುಪಿ: ಕುಂದಗನ್ನಡ ಸಾಹಿತ್ಯಲೋಕ ಬ್ರಹ್ಮ ಅಶೋಕ್ ನೀಲಾವರ ನಿಧನ

 

error: Content is protected !!
Scroll to Top