ವೀರೇಂದ್ರ ಹೆಗ್ಗಡೆ ಅವರಿಂದ ‘ಮಂದಾರ’ ಪ್ರಾಯೋಗಿಕ ಪತ್ರಿಕೆ ಅನಾವರಣ !

(ನ್ಯೂಸ್ ಕಡಬ)newskadaba.com ಧರ್ಮಸ್ಥಳ, ಫೆ.03. ಉಜಿರೆಯ ಎಸ್‌ಡಿಎಂ ಕಾಲೇಜಿನ ಬಿಬಿಎ ಮತ್ತು ಬಿಎ ವಿದ್ಯಾರ್ಥಿಗಳು ಆರಂಭಿಸಿರುವ ‘ಮಂದಾರ’ ಪ್ರಾಯೋಗಿಕ ಮಾಸಪತ್ರಿಕೆಯನ್ನು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ, ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರು ಶ್ರೀಕ್ಷೇತ್ರದಲ್ಲಿ ಅನಾವರಣಗೊಳಿಸಿದರು.


ಬಳಿಕ ಪತ್ರಿಕೆಯ ಉದ್ದೇಶ, ರೂಪುರೇಷಗಳ ಬಗ್ಗೆ ಮಾಹಿತಿ ಪಡೆದು, ಶುಭಹಾರೈಸಿದರು. ಈ ಸಂದರ್ಭದಲ್ಲಿ ಉಜಿರೆಯ ಎಸ್‌ಡಿಎಂ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ.ಭಾಸ್ಕರ ಹೆಗಡೆ, ಎ.ಆರ್.ರಕ್ಷಿತ್ ರೈ, ಸಂಪಾದಕ ಚಂದನ್ ಭಟ್, ವ್ಯವಸ್ಥಾಪಕ ಸಂಪಾದಕ ಎಂ.ಎಸ್.ಶೋಭಿತ್ ಉಪಸ್ಥಿತರಿದ್ದರು.
‘ಮಂದಾರ’ ಸಂಪೂರ್ಣ ವರ್ಣಮಯ ಪುಟಗಳನ್ನು ಮತ್ತು ವಿಶೇಷ ವಿನ್ಯಾಸ ಹೊಂದಿರುವ ಮಾಸಪತ್ರಿಕೆಯಾಗಿದ್ದು, ಉಜಿರೆ ಎಸ್‌ಡಿಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮಾರ್ಗದರ್ಶನದಲ್ಲಿ ಪ್ರಕಟಗೊಳ್ಳಲಿದೆ. ಸಾಹಿತ್ಯ, ಪರಿಸರ, ವಿಜ್ಞಾನ, ಪ್ರವಾಸ, ವಾಣಿಜ್ಯ ಮುಂತಾದ ವಿಷಯಗಳ ಕುರಿತು ವಿದ್ಯಾರ್ಥಿಗಳು ಮತ್ತು ಹೆಸರಾಂತ ಲೇಖಕರು ಬರೆದ ಲೇಖನಗಳು ಪ್ರಕಟಗೊಳ್ಳುತ್ತದೆ.

error: Content is protected !!
Scroll to Top