ಸರಗಳ್ಳತನದಿಂದ ಬಂಧಿತನಾಗಿದ್ದ ಆರೋಪಿ ಆತ್ಮಹತ್ಯೆಗೆ ಯತ್ನ

(ನ್ಯೂಸ್ ಕಡಬ)newskadaba.com ಬೆಂಗಳೂರು, ಜ.31. ನಗರದಲ್ಲಿ ಕಳ್ಳತನ, ದೌರ್ಜನ್ಯ, ಸುಲಿಗೆ ಪ್ರಕರಣ ಹೆಚ್ಚಾಗುತ್ತಿದೆ. ಬೆಂಗಳೂರಿನ ರಾಜಗೋಪಾಲ ನಗರ ಪೊಲೀಸ್‌ ಠಾಣೆಯಲ್ಲಿ ಸರಗಳ್ಳತನ ಪ್ರಕರಣದಲ್ಲಿ ಬಂಧಿತನಾಗಿದ್ದ ಆರೋಪಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.

ಅಬ್ರಾರ್‌ ಅಲಿಯಾಸ್‌ ಬಾಷ ಎಂಬಾತ ಆತ್ಮಹತ್ಯೆಗೆ ಯತ್ನಿಸಿದ ಆರೋಪಿ ಆಗಿದ್ದಾನೆ.ಪೊಲೀಸ್ ಕಾನ್‌ ಸ್ಟೇಬಲ್‌ ಪ್ರಕಾಶ್‌ ಅವರು ಆರೋಪಿ ಅಬ್ರಾರ್‌ ನ ಹ್ಯಾಂಡ್‌ ಕಪ್‌ ಹಾಗೂ ಲೀಡಿಂಗ್‌ ಚೈನ್‌ ಹಾಕಿ ಶೌಚಾಲಯಕ್ಕೆ ಕರೆದೊಯ್ದಿದ್ದಾರೆ. ಈ ವೇಳೆ ಶೌಚಕ್ಕೆ ಹೋಗುವಂತೆ ಒಳ ಹೋದ ಆರೋಪಿ ಅಲ್ಲಿಂದ ಫಿನಾಯಿಲ್‌ ಕುಡಿದ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ತಕ್ಷಣ ಹೆಗ್ಗನಹಳ್ಳಿಯಲ್ಲಿರುವ ಜೈಮಾರುತಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಸಂಬಂಧ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದರು.

Also Read  ನಾಪತ್ತೆಯಾದ ಫೋಟೋಗ್ರಾಫರ್ ಕೊಲೆಯಾಗಿ ಪತ್ತೆ ➤ ಆಸ್ತಿ ಆಸೆಗೆ ಅಳಿಯನನ್ನೇ ಕೊಲೆಗೈದು ಕಾಡಿನಲ್ಲಿ ಹೂತು ಹಾಕಿದ ಮಾವ..! ➤➤ ನಾಲ್ವರ ಅರೆಸ್ಟ್

error: Content is protected !!
Scroll to Top