➤ ಊಟ ಮಾಡುತ್ತಿದ್ದ ವೇಳೆ ಬಂದೆರಗಿದ ಜವರಾಯ, ಕುಳಿತಲ್ಲೇ ಕೊನೆಯುಸಿರೆಳೆದ ವ್ಯಕ್ತಿ!

(ನ್ಯೂಸ್ ಕಡಬ) newskadaba.com,ಕಲಬುರಗಿ. ಜ.30. ಊಟ ಮಾಡುತ್ತಿರುವಾಗಲೇ ವ್ಯಕ್ತಿಯೋರ್ವ  ಸಾವನ್ನಪ್ಪಿರುವ ಘಟನೆ ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಭೂಸನೂರ ಗ್ರಾಮದಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಲಕ್ಷ್ಮಣ‌ ಚಿಂಚನಸೂರ್ ಎಂದು ಗುರುತಿಸಲಾಗಿದೆ. ಕಬ್ಬು ತುಂಬಿದ ಟ್ರ್ಯಾಕ್ಟರ್  ಮೃತ ಲಕ್ಷ್ಮಣ ​ಕುಳಿತು ಊಟ ಮಾಡುತ್ತಿದ್ದ ಶೆಡ್​​ ಮೇಲೆ ಪಲ್ಟಿಯಾಗಿ ಈ ದುರ್ಘಟನೆ ಸಂಭವಿಸಿದೆ.

ನಿಂಬರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ನಡೆದಿದ್ದು, ನಿನ್ನೆ ರಾತ್ರಿ ಮನೆ ಶೆಡ್​​ನಲ್ಲಿ ಗಂಡ ಹೆಂಡತಿ ಕುಳಿತು ಊಟ ಮಾಡುತ್ತಿದ್ದರು. ಈ ವೇಳೆ ಪತಿಗೆ ಕುಡಿಯಲು ನೀರು ತರಲು ಪತ್ನಿ ಹೊರ ಬಂದರು ಈ ಸಂದರ್ಭದಲ್ಲಿ ನಿಂಬಾಳದಿಂದ ಭೂಸನೂರು ಸಕ್ಕರೆ‌ ಕಾರ್ಖಾನೆಗೆ ಕಬ್ಬಿನ ಲೋಡ್ ತುಂಬಿಕೊಂಡು ಬರುತ್ತಿದ್ದ ಟ್ರ್ಯಾಕ್ಟರ್, ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲೇ ಇರುವ ಶೆಡ್​​ಗೆ ನುಗ್ಗಿ ಪಲ್ಟಿಯಾಗಿದೆ.

Scroll to Top