ಲಸಿಕೆ ಪಡೆಯಲು ಬಲವಂತ ಪಡಿಸುವಂತಿಲ್ಲ ➤ ಹೈ ಕೋರ್ಟ್ ಮಹತ್ವದ ತೀರ್ಪು

(ನ್ಯೂಸ್ ಕಡಬ)newskadaba.com  ನವದೆಹಲಿ, ಜ.27. ಉದ್ಯೋಗಿಗೆ ಕೋವಿಡ್ -19 ಲಸಿಕೆ ಪಡೆಯಲು ಬಲವಂತ ಪಡಿಸುವಂತಿಲ್ಲ ಎಂದು ದೆಹಲಿ ಹೈ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಅಲ್ಲದೆ ಕರ್ತವ್ಯಕ್ಕೆ ಅವಕಾಶ ನಿರಾಕರಿಸಲಾಗಿದ್ದ ಉದ್ಯೋಗಿಗೆ 30 ದಿನಗಳೊಳಗಾಗಿ ಮರಳಿ ಪಡೆಯುವಂತೆ ನಿರ್ದೇಶಿಸಿದೆ.ಕೋವಿಡ್- 19 ಲಸಿಕೆ ತಮಗೆ ಬಲವಂತಪಡಿಸಲಾಗುತ್ತಿದ್ದು, ಕರ್ತವ್ಯ ನಿರ್ವಹಣೆಗೆ ಅವಕಾಶ ನೀಡುತ್ತಿಲ್ಲ ಎಂದು ಶಿಕ್ಷಕರೊಬ್ಬರು ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದು, ಈ ಪ್ರಕರಣದ ವಿಚಾರಣೆ ವೇಳೆ ಮಹತ್ವದ ತೀರ್ಪು ಹೊರ ಬಿದ್ದಿದೆ.

ಅಲ್ಲದೆ ಶಿಕ್ಷಕರಿಗೆ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಲು ಅನುವು ಮಾಡಿಕೊಡುವಂತೆ ಆದೇಶಿಸಿದೆ.ಈ ಹಿಂದೆಯೂ ಜಾಕೋಬ್ ಎಂಬವರು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಈ ಪ್ರಕರಣದ ವಿಚಾರಣೆ ವೇಳೆ ಲಸಿಕೆ ತೆಗೆದುಕೊಳ್ಳುವುದು ಸೇರಿದಂತೆ ಆರೋಗ್ಯಕ್ಕೆ ಸಂಬಂಧಿಸಿದ ಚಿಕಿತ್ಸೆ ಪ್ರತಿಯೊಬ್ಬರ ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿದ್ದು ಎಂದು ಅಭಿಪ್ರಾಯಪಟ್ಟಿತ್ತು.

Also Read  ಮಂಗಳೂರಿನಲ್ಲಿ ತಂಗಿದ ಪ್ರಧಾನಿ ಮೋದಿ ► ಬಿಜೆಪಿ ಕಾರ್ಯಕರ್ತರೊಂದಿಗೆ ಸಂಭ್ರಮಾಚರಣೆ

error: Content is protected !!
Scroll to Top