ಬೀಚ್‌ನಲ್ಲಿ ಮುಳುಗಿ ಇಬ್ಬರು ಭಾರತೀಯರ ಮೃತ್ಯು

(ನ್ಯೂಸ್ ಕಡಬ)newskadaba.com ನ್ಯೂಜಿಲಾಂಡ್, ಜ.25. ನ್ಯೂಜಿಲೆಂಡ್‌ನ ಪಿಹಾ ಬೀಚ್‌ನಲ್ಲಿ ಈಜುತ್ತಿದ್ದ ಸಂದರ್ಭದಲ್ಲಿ ಮುಳುಗಿ ಇಬ್ಬರು ಭಾರತೀಯರು ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ. ‘ಮೃತರನ್ನು ಸೌರಿನ್‌ ನಯನ್‌ಕುಮಾರ್‌ ಪಟೇಲ್ (28) ಮತ್ತು ಅನ್ಶೌಲ್‌ ಶಾ (31) ಎಂದು ಗುರುತಿಸಲಾಗಿದೆ.

ಇವರು ಗುಜರಾತ್‌ನ ಅಹಮದಾಬಾದ್‌ ಮೂಲದವರಾಗಿದ್ದು, ಆಕ್ಲೆಂಡ್‌ನಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು’ ಎಂದು ವರದಿ ಮಾಡಿದೆ. ಎಲೆಕ್ಟ್ರಾನಿಕ್‌ ಎಂಜಿನಿಯರ್‌ ಆಗಿದ್ದ ಪಟೇಲ್ ಕಳೆದ ವರ್ಷ ಆಗಸ್ಟ್‌ನಲ್ಲಿ ನ್ಯೂಜಿಲೆಂಡ್‌ಗೆ ತೆರಳಿದ್ದರು. ಶಾ, ಅನಿಲ ಕೇಂದ್ರದಲ್ಲಿ ಕ್ಯಾಷಿಯರ್‌ ಆಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

Also Read  ಕಡಬ ತಾ| ಜಾತ್ಯಾತೀತ ಜನತಾದಳದ ಪ್ರಧಾನ ಕಾರ್ಯದರ್ಶಿಯಾಗಿ ಡಾ| ತಿಲಕ್ ಎ.ಎ.

error: Content is protected !!
Scroll to Top