ಬಂಟ್ವಾಳ: ಅಡಿಕೆ ಮರದಿಂದ ಬಿದ್ದು ಕಾರ್ಮಿಕ ಮೃತ್ಯು

(ನ್ಯೂಸ್ ಕಡಬ)newskadaba.com ಬಂಟ್ವಾಳ, ಜ.25. ಕೃಷಿಕರೊಬ್ಬರು ಅಡಿಕೆ ಮರದಿಂದ ಬಿದ್ದು ಮೃತಪಟ್ಟ ಘಟನೆ ವಿಟ್ಲ ಮುಡ್ನೂರು ಗ್ರಾಮದ ಕೊಪ್ಪಳದಲ್ಲಿ ನಡೆದಿದೆ.

ಕೊಪ್ಪಳ ನಿವಾಸಿ ಹರೀಶ್ (53) ಮೃತರು ಎಂದು ಗುರುತಿಸಲಾಗಿದೆ. ತನ್ನ ತೋಟದಲ್ಲಿ ಕೃಷಿ ಯಂತ್ರದ ಮೂಲಕ ಅಡಿಕೆ ತೆಗಿಯುವಾಗ ಆಯತಪ್ಪಿ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಮೃತರು ಪತ್ನಿ ಲೀಲಾ, ಪುತ್ರರಾದ ರಾಜ್ಯ ಮಟ್ಟದ ಕಬಡ್ಡಿ ಆಟಗಾರ ವಿಶ್ವರಾಜ್ ಹಾಗೂ ವಿನೋದ್ ರಾಜ್‌ನನ್ನು ಅಗಲಿದ್ದಾರೆ.

Scroll to Top