ಹೃದಯಾಘಾತದಿಂದ ಕರಾವಳಿಯ ಯೋಧ ಭೋಪಾಲ್ ನಲ್ಲಿ ಮೃತ್ಯು

(ನ್ಯೂಸ್ ಕಡಬ)newskadaba.com ಮಂಗಳೂರು, ಜ.25. ಭೋಪಾಲ್ ನಲ್ಲಿ ಸಶಸ್ತ್ರ ಸೀಮಾ ಬಲ್ ನಲ್ಲಿ ಕರ್ತವ್ಯದಲ್ಲಿದ್ದ ಕರಾವಳಿ ಮೂಲದ ಯೋಧರೊಬ್ಬರು ಹೃದಯಾಘಾತಕ್ಕೆ ಬಲಿಯಾದ ಘಟನೆ ವರದಿಯಾಗಿದೆ. ಮಂಗಳೂರಿನ ಶಕ್ತಿನಗರ ನಿವಾಸಿ ಯೋಧ ಮುರಲೀಧರ ರೈ(37) ಹೃದಯಾಘಾತದಿಂದ ಮೃತಪಟ್ಟಿದ್ದು, ಅವರ ಪಾರ್ಥಿವ ಶರೀರವನ್ನು ಹುಟ್ಟೂರಿಗೆ ತರಲಾಗಿದೆ.


ಮಧ್ಯಪ್ರದೇಶದ ಭೋಪಾಲದಲ್ಲಿ ಕರ್ತವ್ಯದಲ್ಲಿದ್ದು, ಮಲಗಿದ್ದಾಗಲ್ಲೇ ಹೃದಯಾಘಾತದಿಂದ ಮುರಲೀಧರ ರೈ ಸಾವನ್ನಪ್ಪಿದ್ದರು. ಅವರ ಪಾರ್ಥಿವ ಶರೀರವನ್ನು ಮಂಗಳೂರು ವಿಮಾನ ನಿಲ್ದಾಣಕ್ಕೆ ತರಲಾಗಿದ್ದು ನಿಲ್ದಾಣ ಆವರಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ ಸರ್ಕಾರದ ವತಿಯಿಂದ ಗೌರವ ಸಲ್ಲಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್‌ ಸೇರಿದಂತೆ ಅಧಿಕಾರಿಗಳು ಭಾಗಿಯಾಗಿ ಗೌರವ ಸಲ್ಲಿಸಿದ್ದಾರೆ. ಆ ಬಳಿಕ ಎ.ಜೆ ಆಸ್ಪತ್ರೆಯ ಶವಗಾರಕ್ಕೆ ಮೃತ ಯೋಧನ ಪಾರ್ಥಿವ ಶರೀರ ರವಾನಿಸಲಾಗಿದೆ.

Also Read  ಸುಲಭವಾದ ಮತ್ತು ರುಚಿಕರ ತಿನಿಸು 'ಹೆಸರು ಬೇಳೆ' ತೊವೆ !     ➤ ಮಾಡುವ ವಿಧಾನ

error: Content is protected !!
Scroll to Top