ಅಕ್ರಮ ಗೋಮಾಂಸ ಅಡ್ಡೆಗೆ ದಾಳಿ ➤  ಮೂವರು ವಶಕ್ಕೆ

(ನ್ಯೂಸ್ ಕಡಬ)newskadaba.com  ಮಂಗಳೂರು, ಜ.24. ಅಕ್ರಮವಾಗಿ ಗೋಮಾಂಸ ತಯಾರಿಸುತ್ತಿದ್ದ ಅಡ್ಡೆಯೊಂದಕ್ಕೆ ದಾಳಿ ನಡೆಸಿದ ಪೊಲೀಸರು ಮೂವರನ್ನು ವಶಕ್ಕೆ ಪಡೆದ ಘಟನೆ ಬೆಳ್ತಂಗಡಿ ಮದ್ದಡ್ಕ ಬಳಿ ನಡೆದಿದೆ.

ಮದ್ದಡ್ಕದ ಹಮೀದ್‌ (46), ಬೇಲೂರು ಗೋಣಿಬೀಡಿನ ಇಸ್ಮಾಯಿಲ್‌ (41) ಮತ್ತು ಹ್ಯಾರಿಸ್‌ (30) ಪೊಲೀಸ್ ವಶವಾದವರು. ಕುವೆಟ್ಟು ಗ್ರಾಮದ ಮದ್ದಡ್ಕದ ಅನಿಲ ಎಂಬಲ್ಲಿಯ ಮನೆಯೊಂದರಲ್ಲಿ ಗೋವಧೆ ಮಾಡಿ ಅಕ್ರಮವಾಗಿ ಮಾಂಸ ತಯಾರಿಸುತ್ತಿರುವ ಬಗ್ಗೆ ಬಜರಂಗದಳ ಕಾರ್ಯಕರ್ತರಿಗೆ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಅವರು ಬೆಳ್ತಂಗಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಕಾರ್ಯಾಚರಣೆ ನಡೆಸಿದ ಪೊಲೀಸರು ಅಕ್ರಮ ಗೋಮಾಂಸ ತಯಾರಿಸುವ ಅಡ್ಡೆಗೆ ದಾಳಿ ನಡೆಸಿದ್ದರು. ಈ ವೇಳೆ ಸುಮಾರು 55 ಕೆ.ಜಿ.ಯಷ್ಟು ಗೋಮಾಂಸ ಹಾಗೂ ಮಾಂಸ ತಯಾರಿಸುತ್ತಿದ್ದ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೆ ಗೋಮಾಂಸ ತಯಾರಿಸುತ್ತಿದ್ದ ಮೂವರನ್ನೂ ವಶಕ್ಕೆ ಪಡೆದುಕೊಂಡಿದ್ದಾರೆ. ಕರ್ನಾಟಕ ಗೋವಧೆ ಪ್ರತಿಬಂಧಕ ಮತ್ತು ಜಾನುವಾರು ಸಂರಕ್ಷಣ ಅಧಿನಿಯಮದಡಿ ಪ್ರಕರಣ ದಾಖಲಿಸಿದ್ದಾರೆ.

Also Read  ವಿವಾಹದಲ್ಲಿ ಅಡಚಣೆ ಸಮಸ್ಯೆಗೆ ಹೀಗೆ ಮಾಡಿ ಬೇಗ ಮದುವೆ ಭಾಗ್ಯ ಬಯಸುವವರು ಈ ರೀತಿ ಮಾಡಿದರೆ ಸಾಕು

 

 

error: Content is protected !!
Scroll to Top