ದೆಹಲಿಯಲ್ಲಿ ಕಂಪಿಸಿದ ಭೂಮಿ ➤ ಮನೆಯಿಂದ ಹೊರಗಡೆ ಓಡಿ ಬಂದ ಜನ

ನ್ಯೂಸ್ ಕಡಬ) newskadaba.com, ನವದೆಹಲಿ. ಜ. 24. ರಾಷ್ಟ್ರ ರಾಜಧಾನಿ ವಲಯದಲ್ಲಿ ಭೂಕಂಪನ ಉಂಟಾಗಿರುವ ಘಟನೆ ನಡೆದಿದೆ. ಭೂಮಿ ಕಂಪನದಿಂದ ಕಟ್ಟಡಗಳಲ್ಲಿರುವರಿಗೆ ಸುಮಾರು 30 ಸೆಕೆಂಡುಗಳ ಕಾಲ ಭಯದ ಅನುಭವ ಉಂಟಾಗಿದ್ದು, ಅನೇಕರು ಮನೆಯಿಂದ ಓಡಿ ಬಂದರು ಎಂದು ತಿಳಿದು ಬಂದಿದೆ.

ಉತ್ತರಾಖಂಡ,  ನೇಪಾಳದಲ್ಲಿ ಭೂಕಂಪ ಉಂಟಾಗಿದ್ದು, ರಿಕ್ಟರ್ ಮಾಪಕದಲ್ಲಿ 5.8 ತೀವ್ರತೆ ದಾಖಲಾಗಿದೆ. ಇದರ ಪರಿಣಾಮ ದೆಹಲಿಯಲ್ಲಿ ಭೂಕಂಪನ ಉಂಟಾಗಿರಬಹುದು ಎಂದು ಅಂದಾಜಿಸಲಾಗಿದೆ.

 

error: Content is protected !!
Scroll to Top