ಜಾತ್ರೆಯಲ್ಲಿ ದೇವರ ವಿಗ್ರಹವನ್ನು ಹೊತ್ತುಕೊಂಡಿದ್ದ ಕ್ರೇನ್‌ ಬಿದ್ದು ನಾಲ್ವರು ಮೃತ್ಯು

(ನ್ಯೂಸ್ ಕಡಬ)newskadaba.com ಚೆನ್ನೈ, ಜ.23. ಜಾತ್ರೆಯಲ್ಲಿ ದೇವರ ವಿಗ್ರಹವನ್ನು ಹೊತ್ತುಕೊಂಡಿದ್ದ ಕ್ರೇನ್‌ ಕೆಳಗೆ ಬಿದ್ದು ನಾಲ್ವರು ಮೃತಪಟ್ಟು, 9 ಮಂದಿ ಗಾಯಗೊಂಡಿರುವ ಘಟನೆ ಅರಕ್ಕೋಣಂ ಸಮೀಪದ ನೆಮಿಲಿಯ ಕಿಲ್ವೀಡಿ ಗ್ರಾಮದಲ್ಲಿ ನಡೆದಿದೆ.

ಕೆ.ಮುತ್ತುಕುಮಾರ್(39),ಎಸ್.ಭೂಪಾಲನ್ (40), ಮತ್ತು ಬಿ.ಜೋತಿಬಾಬು (17) ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ.

ಜಾತ್ರೆಯ ಪ್ರಯುಕ್ತ ದೇವತೆಯ ವಿಗ್ರಹವನ್ನು ಕ್ರೇನ್‌ ಮೂಲಕ ಗ್ರಾಮದಲ್ಲಿ ಹೊತ್ತುಕೊಂಡು ಮೆರವಣಿಗೆ ಮಾಡುತ್ತಿದ್ದರು. ಮೆರವಣಿಗೆಯಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರು. ದೇವರನ್ನು ಅಲಂಕರಿಸಲು ಎಂಟು ಜನ ಕ್ರೇನ್‌ ಮೇಲೆಯೇ ವಿಗ್ರಹದ ಪಕ್ಕದಲ್ಲಿದ್ದರು. ಈ ವೇಳೆ ಎಂಟು ಜನರ ಭಾರದಿಂದ ಕ್ರೇನ್‌ ಒಂದು ಕಡೆ ವಾಲಿ ಏಕಾಏಕಿ ಬಿದ್ದು ಅವಘಡ ಸಂಭವಿಸಿದೆ.

Also Read  ಮಾರುತಿ ಮತ್ತು ಸ್ವಿಫ್ಟ್ ಕಾರುಗಳ ನಡುವೆ ಭೀಕರ ಅಫಘಾತ ➤ ಐವರು ಸ್ಥಳದಲ್ಲೇ ಮೃತ್ಯು

error: Content is protected !!
Scroll to Top