ಅಕ್ರಮವಾಗಿ ಇರಿಸಿದ್ದ ಸ್ಫೋಟಕ ತಿಂದ ಹಸು ➤ ಸ್ಫೋಟಕ ಸಿಡಿದು ಹಸು ಗಂಭೀರ

(ನ್ಯೂಸ್ ಕಡಬ) newskadaba.com ಕಡಬ, ಫೆ.17. ಅಕ್ರಮವಾಗಿ ಇರಿಸಿದ್ದ ಸ್ಫೋಟಕವನ್ನು ತಿಂದ ಹಸುವೊಂದು ಸ್ಫೋಟಕ ಸಿಡಿದ ಪರಿಣಾಮ ದವಡೆ ಕಿತ್ತುಹೋಗಿ ಗಂಭೀರ ಗಾಯಗೊಂಡ ಘಟನೆ ಕಡಬದಲ್ಲಿ ನಡೆದಿದೆ.

ಕಡಬ ತಾಲೂಕಿನ ದೇರಾಜೆಯ ಸಂಪಡ್ಕ ನಿವಾಸಿ ಬಾಲಚಂದ್ರ ಎಂಬವರಿಗೆ ಸೇರಿದ ಹಸು ಯಾರೋ ಕಿಡಿಗೇಡಿಗಳು ಇರಿಸಿದ್ದ ಸ್ಪೋಟಕವನ್ನು ತಿಂದಿದೆ. ಹಸುವಿನ ದವಡೆ ಸೀಳಿ ಬಂದಿದ್ದು, ಗಂಭೀರ ಗಾಯಗೊಂಡಿದೆ‌. ಸ್ಥಳಕ್ಕೆ ಕಡಬ ಪೋಲೀಸರು ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ.

Scroll to Top