ಬಿಸಿ ಬಿಸಿ ಕ್ಯಾರೆಟ್ ಬಾತ್ ಮಾಡುವ ವಿಧಾನ 

(ನ್ಯೂಸ್ ಕಡಬ)newskadaba.com  ಜ.21. ಕ್ಯಾರೆಟ್ ಅನ್ನು ನಾವು ಹೆಚ್ಚಾಗಿ ಪಲಾವ್ ಮಾಡುವಾಗ ಬಳಸುತ್ತೇವೆ. ಪಲಾವಿನ ರುಚಿಗೆ ಇನ್ನಷ್ಟು ಮೆರಗು ನೀಡುವುದು ಕ್ಯಾರೆಟ್. ಅಂತೆಯೇ ಕ್ಯಾರೆಟ್ ಬಾತ್ ಕೂಡ ಅಷ್ಟೇ ರುಚಿಕರ. ಮಾಡುವುದು ಕೂಡ ಅತಿ ಸುಲಭ.

ಬೇಕಾಗುವ ಸಾಮಗ್ರಿಗಳು:

ಅನ್ನ, ಕ್ಯಾರೇಟ್, ಈರುಳ್ಳಿ, ಹಸಿ ಮೆಣಸಿನಕಾಯಿ, ಕರಿಬೇವು, ಕೊತ್ತಂಬರಿ ಸೊಪ್ಪು, ಲಿಂಬೆಹಣ್ಣು, ಶುಂಠಿ, ಎಣ್ಣೆ, ಉದ್ದಿನಬೇಳೆ, ಸಾಸಿವೆ, ಶೇಂಗಾ, ಅರಿಶಿಣ, ಉಪ್ಪು ಹಾಗೂ ಸಕ್ಕರೆ.

ಮಾಡುವ ವಿಧಾನ:
ಕ್ಯಾರೆಟ್ ನ ಸಿಪ್ಪೆ ತೆಗೆದುಕೊಂಡು ತುರಿದುಕೊಳ್ಳಬೇಕು. ನಂತರ ಒಂದು ಬಾಣಲೆಗೆ ಎಣ್ಣೆ, ಸಾಸಿವೆ, ಉದ್ದಿನ ಬೇಳೆ, ಶೇಂಗಾ, ಹಸಿ ಮೆಣಸು, ಶುಂಠಿ, ಅರಿಶಿಣ, ಕರಿಬೇವು ಹಾಕಿ ಒಗ್ಗರಣೆ ಸಿದ್ಧ ಮಾಡಿಕೊಳ್ಳಬೇಕು. ಸಿದ್ದಪಡಿಸಿಕೊಂಡ ಕ್ಯಾರೆಟ್ ತುರಿಯನ್ನು ಹಾಗೂ ಈರುಳ್ಳಿಯನ್ನು ಒಗ್ಗರಣೆಗೆ ಹಾಕಿ ಹುರಿಯಬೇಕು.

Also Read  ನೀವು ಇಷ್ಟಪಡುವಂತಹ ವ್ಯಕ್ತಿ ನಿಮ್ಮವರಂತೆ ಆಗಲು ಈ ಒಂದು ತಂತ್ರವನ್ನು ಮಾಡಿ

ಕ್ಯಾರೆಟ್ ಚೆನ್ನಾಗಿ ಹುರಿದ ನಂತರ ಅನ್ನ, ಉಪ್ಪು, ಸಕ್ಕರೆ, ಲಿಂಬೆ ರಸ ಹಾಗೂ ಕೊತ್ತಂಬರಿ ಸೊಪ್ಪನ್ನು ಹಾಕಿ ಚೆನ್ನಾಗಿ ಕಲಸಬೇಕು. ಇಷ್ಟಾದರೆ ರುಚಿಕರ ಕ್ಯಾರೆಟ್ ಬಾತ್ ರೆಡಿ.

 

error: Content is protected !!
Scroll to Top