ಹೆಂಡತಿ ಜೊತೆ ಸಲುಗೆಯಿಂದ ಮಾತನಾಡಿದ್ದಕ್ಕೆ ಸಂಬಂಧಿಯನ್ನೇ ಹತ್ಯೆಗೈದ ಪತಿರಾಯ      

(ನ್ಯೂಸ್ ಕಡಬ)newskadaba.com  ವಿಜಯಪುರ, ಜ.21. ಹೆಂಡತಿ ಜೊತೆ ಸಲುಗೆಯಿಂದ ಮಾತನಾಡಿದ್ದಕ್ಕೆ ಗಂಡ ಸಂಬಂಧಿಯನ್ನೇ ಕೊಲೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ. ಕಾಳಿಕಾ ನಗರ ನಿವಾಸಿ ಈರಯ್ಯಾ ಮಠ ಎಂಬಾತನು ಅದೇ ಬಡಾವಣೆಯ ದಾನಯ್ಯ ಗಣಚಾರಿ ಪತ್ನಿ ವಾಣಿಯೊಂದಿಗೆ ಸಲುಗೆಯಿಂದ ಮಾತನಾಡುತ್ತಿದ್ದ. ಇದೇ ಕಾರಣಕ್ಕೆ ಅವಳ ಪತಿ ದಾನಯ್ಯ ಗಣಚಾರಿ ಕೊಲೆ ಮಾಡಿದ್ದಾನೆ. ಈ ಘಟನೆ ಸಂಬಂಧ ಇಬ್ಬರು ಪ್ರಮುಖ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಈರಯ್ಯಾ ಮಠ ಎಂಬುವವರು ತಮ್ಮ ಪತ್ನಿ ಕವಿತಾಳ ಜೊತೆಗೆ ಬಾಡಿಗೆ ಮನೆಯಲ್ಲಿ ವಾಸಗಿದ್ದರು. ಇವರ ಮನೆಯ ಸನೀಹವೇ ಇವರ ಸಂಬಂಧಿಕರಾದ ದಾನಯ್ಯ ಗಣಾಚಾರಿ ಮನೆಯಿತ್ತು. ಈರಯ್ಯನ ಮನೆಗೆ ಬಂದ ದಾನಯ್ಯ ಗಣಾಚಾರಿ ಹಾಗೂ ಆತನ ಸಹೋದರ ಸಿದ್ದಯ್ಯಾ ಹಾಗೂ ಸ್ನೇಹಿತ ಸಚಿನ್ ಬಂದು ಈರಯ್ಯಾ ಮಠನನ್ನು ಕರೆದಿದ್ದಾರೆ. ಆಗ ಯಾಕೆ ಎಂದು ಕವಿತಾ ಪ್ರಶ್ನೆ ಮಾಡಿದ್ದಾಳೆ. ಆಗ ಮಾತನಾಡಿದ ದಾನಯ್ಯ ನನ್ನ ಪತ್ನಿ ವಾಣಿಯ ತಂದೆ ಗುರಣ್ಣ ಉರ್ಫ ಗುರಯ್ಯಾ ನ್ಯಾಯ ಪಂಚಾಯತಿ ಮಾಡುವುದು ಇದೆ.

Also Read  ರಾಜ್ಯದಲ್ಲಿ ಡೆಂಗ್ಯೂ ಪ್ರಕರಣ ಏರಿಕೆ..!           ನಿಯಂತ್ರಣಕ್ಕೆ ಆದೇಶ ಹೊರಡಿಸಿದ ರಾಜ್ಯ ಸರ್ಕಾರ

 

error: Content is protected !!
Scroll to Top