(ನ್ಯೂಸ್ ಕಡಬ) newskadaba.com ಕಾರ್ಕಳ, ಜೂ.15. ಶಿಕಾರಿಗೆ ತೆರಳಿದ ವೇಳೆ ಪ್ರಾಣಿ ಎಂದು ತಿಳಿದು ಮರ ಕಡಿಯುತ್ತಿದ್ದ ವ್ಯಕ್ತಿಯ ಮೇಲೆ ಗುಂಡು ಹಾರಿಸಿದ ಪರಿಣಾಮ ಹಾರಿಸಿದ ಗುಂಡು ಮರ ಕಡಿಯುತ್ತಿದ್ದ ವ್ಯಕ್ತಿಗೆ ತಗುಲಿ ಸಾವನ್ನಪ್ಪಿದ ಘಟನೆ ತಡರಾತ್ರಿ ಕಾಕ೯ಳ ತಾಲೂಕಿನ ಕಡ್ತಲ ಮೀಸಲು ಅರಣ್ಯದಲ್ಲಿ ನಡೆದಿದೆ.
ನಿನ್ನೆ ತಡರಾತ್ರಿ ಐದು ಜನರನ್ನೊಳಗೊಂಡ ತಂಡವೊಂದು ಕಡ್ತಲ ಮೀಸಲು ಅರಣ್ಯದಲ್ಲಿ ಶಿಕಾರಿಗೆಂದು ತೆರಳಿದ್ದರು. ಇದೇ ವೇಳೆ ರವಿ ಎಂಬಾತ ಮರಕಳ್ಳತನ ನಡೆಸಲು ಬಂದಿದ್ದ ಎನ್ನಲಾಗಿದೆ. ರವಿ ಮರಕಡಿಯುತ್ತಿದ್ದು ಶಿಕಾರಿಗೆ ಬಂದ ತಂಡವನ್ನು ದೂರದಿಂದ ಗಮನಿಸಿ ಅತ ಅರಣ್ಯಧಿಕಾರಿಗಳೆಂದು ತಿಳಿದು ಓಡಿದಾಗಿ ಶಿಕಾರಿಗೆ ಬಂದ ತಂಡ ಪ್ರಾಣಿ ಎಂದು ಗುಂಡು ಹಾರಿಸಿದ್ದಾರೆ. ಈ ಗುಂಡು ರವಿಗೆ ತಗುಲಿದ ಪರಿಣಾಮ ಅತ ಸಾವನ್ನಪ್ಪಿದ್ದು, ಮರಣೋತ್ತರ ಪರೀಕ್ಷೆ ಗಾಗಿ ಮಣಿಪಾಲಕ್ಕೆ ಶವವನ್ನು ರವಾನಿಸಲಾಗಿದೆ. ಅಲ್ಲದೆ ಶಿಕಾರಿ ನಡೆಸಿದ ಸುಂದರ ನಾಯ್ಕ, ಹಾಗೂ ಜಿತು ಎಂಬವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ಪ್ರಕರಣವನ್ನು ದಾಖಲಿಸಿದ್ದಾರೆ. ಈ ಕುರಿತು ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಉಳಿದ ಅರೋಪಿಗಳ ಪತ್ತೆ ಕಾರ್ಯ ಮುಂದುವರೆಸಿದ್ದಾರೆ. ಮರಕಡಿದ ಜಾಗದಲ್ಲಿ ಗರಗಸ ಹಾಗೂ ಮರಕಡಿಯುವ ಅಯುಧಗಳನ್ನು ಅರಣ್ಯಾಧಿಕಾರಿ ವಶಪಡಿಸಿಕೊಂಡಿದ್ದಾರೆ.