ಸಚಿವರು, ಶಾಸಕರು ಮಾಡಬಹುದಾದ ಕೆಲಸ ಪ್ರಧಾನಿಯಿಂದ ಮಾಡಿಸುತ್ತಿದ್ದಾರೆ !! ➤ ಶಾಸಕ ಪ್ರಿಯಾಂಕ್ ಖರ್ಗೆ

(ನ್ಯೂಸ್ ಕಡಬ)newskadab.com  ಕಲಬುರಗಿ, ಜ.18. ಸಚಿವರು ಅಥವಾ ಶಾಸಕರು ವಿತರಿಸಬಹುದಾಗ ಹಕ್ಕುಪತ್ರ ವಿತರಣೆಗೆ ಪ್ರಧಾನಿಯನ್ನು ಕರೆಸುತ್ತಿದ್ದಾರೆ ಎಂದರೆ ಇವರು ಏನು ಕೆಲಸ ಮಾಡಿಲ್ಲವೆಂದೇ ಅರ್ಥ ಎಂದು ಶಾಸಕರಾದ ಶ್ರೀ ಪ್ರಿಯಾಂಕ್ ಖರ್ಗೆ ಲೇವಡಿ ಮಾಡಿದರು.

ಮಾಹಿತಿ ಪ್ರಕಾರ ಈಗಾಗಲೇ ದಾಖಲಾತಿಗಳು ಇರುವವರಿಗೆ ಮತ್ತೆ ಹಕ್ಕುಪತ್ರ ವಿತರಣೆ ಮಾಡಿಸಲಿದ್ದಾರೆ. ಈ ಬಗ್ಗೆ ಸುಭಾಷ್ ರಾಠೋಡ್ ವಿವರವಾಗಿ ಮಾತನಾಡಿದ್ದಾರೆ. ಯಾರಿಗೆ ಹಕ್ಕುಪತ್ರ ವಿತರಿಸಿದರು ಎನ್ನುವ ಬಗ್ಗೆ ದಾಖಲಾತಿಯೊಂದಿಗೆ ಇನ್ನೆರಡು ದಿನದಲ್ಲಿ ಮಾತನಾಡಲಿದ್ದೇನೆ ಎಂದರು. ಈ ಸರ್ಕಾರದಲ್ಲಿ ಏನು ನಡೆಯುತ್ತಿದೆ? ಎಂದು ಗೊತ್ತಾಗುತ್ತಿಲ್ಲ ಎಂದು ಟೀಕಿಸಿದರು.

Also Read  ಚುನಾವಣೆಯಲ್ಲಿ ಗೆಲ್ಲಲು ನಾನು ವಾಮಾಚಾರ ಮಾಡಿಸಿ ಕೈ ಸುಟ್ಟುಕೊಂಡಿದ್ದೆ ► ಸತ್ಯ ಬಿಚ್ಚಿಟ್ಟ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ

 

error: Content is protected !!
Scroll to Top