➤ನಾಯಿಗೆ ಹೆದರಿ 3ನೇ ಮಹಡಿಯಿಂದ ಕೆಳಗೆ ಬಿದ್ದಿದ್ದ ಸ್ವಿಗ್ಗಿ ಮೃತ್ಯು..!

(ನ್ಯೂಸ್ ಕಡಬ) newskadaba.com, ಹೈದರಾಬಾದ್, ಜ. 16 .​ ಫುಡ್ ಡೆಲಿವರಿಗೆ  ಹೋದಾಗ ನಾಯಿಗೆ ಹೆದರಿ ಸ್ವಿಗ್ಗಿ ಡೆಲಿವರಿ ಬಾಯ್ ಹೈದರಾಬಾದ್​ನ ಅಪಾರ್ಟ್​ಮೆಂಟ್​ನ 3ನೇ ಮಹಡಿಯಿಂದ ಜಿಗಿದ ಘಟನೆ ನಡೆದಿತ್ತು. ಇದೀಗ ಆ ಯುವಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಸ್ವಿಗ್ಗಿ ಡೆಲಿವರಿ ಬಾಯ್ ಫುಡ್ ಆರ್ಡರ್ ಮಾಡಿದವರ ಮನೆಯ ಕಾಲಿಂಗ್ ಬೆಲ್ ಒತ್ತಿದಾಗ ಮನೆಯೊಳಗಿದ್ದ ನಾಯಿ ಜೋರಾಗಿ ಬೊಗಳುತ್ತಾ ಹೊರಗೆ ಬಂದಿತ್ತು. ಆಗ ಹೆದರಿದ ಡೆಲಿವರಿ ಬಾಯ್ ಭಯದಿಂದ ತಪ್ಪಿಸಿಕೊಳ್ಳಲು ಹೋಗಿ ಮಹಡಿಯಿಂದ ಕೆಳಗೆ ಹಾರಿದ್ದರು.

23 ವರ್ಷದ ಮೊಹಮ್ಮದ್ ರಿಜ್ವಾನ್ ಜನವರಿ 11ರಂದು ಬಂಜಾರಾ ಹಿಲ್ಸ್‌ನ ಲುಂಬಿನಿ ರಾಕ್ ಕ್ಯಾಸಲ್ ಅಪಾರ್ಟ್‌ಮೆಂಟ್‌ನ ಮೂರನೇ ಮಹಡಿಯಿಂದ ಗ್ರಾಹಕರ ಮುದ್ದಿನ ಜರ್ಮನ್ ಶೆಫರ್ಡ್‌ನಿಂದ ತಪ್ಪಿಸಿಕೊಂಡು ಓಡುತ್ತಿದ್ದಾಗ ಕೆಳಗೆ ಬಿದ್ದಿದ್ದರು. ಅವರು ಭಾನುವಾರ ಮೃತಪಟ್ಟಿದ್ದಾರೆ.

Scroll to Top