ಬಂಧಿಸಲು ಹೋದ ಪಿಎಸ್‌ಐ ಮುಖಕ್ಕೆ ಪೆಪ್ಪರ್ ಸ್ಪ್ರೇ ➤ ರೌಡಿಶೀಟರ್ ಅರೆಸ್ಟ್..!

Crime

(ನ್ಯೂಸ್ ಕಡಬ)newskadaba.com  ಬೆಂಗಳೂರು, ಜ.16. ಬಂಧಿಸಲು ಹೋಗಿದ್ದ ಪಿಎಸ್‌ಐ ಹಾಗೂ ಹೆಡ್‌ ಕಾನ್‌ಸ್ಟೆಬಲ್ ಮುಖಕ್ಕೆ ಪೆಪ್ಪರ್ ಸ್ಪ್ರೇ ಎರಚಿ ಪರಾರಿಯಾಗಿದ್ದ ರೌಡಿ ಮನು ಅಲಿಯಾಸ್ ಜೆಡಿಯನ್ನು ವಿಜಯನಗರ ಪೊಲೀಸರು ಬಂಧಿಸಿದ್ದಾರೆ.

ಹಲವು ಪ್ರಕರಣಗಳಲ್ಲಿ ಜೈಲಿಗೂ ಹೋಗಿ ಬಂದಿದ್ದ. ಈತನ ಹೆಸರು ರೌಡಿ ಪಟ್ಟಿಯಲ್ಲಿತ್ತು. ಇತ್ತೀಚೆಗೆ ಈತನನ್ನು ಬಂಧಿಸಲಾಗಿದ್ದು, ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾನೆ’ ಎಂದು ಪೊಲೀಸರು ಹೇಳಿದರು. ಹಲವು ಪ್ರಕರಣದ ಆರೋಪಿಯಾಗಿದ್ದ ಮನು, ತಲೆಮರೆಸಿಕೊಂಡು ಸುತ್ತಾಡುತ್ತಿದ್ದ. ವಿಶ್ವೇಶ್ವರಯ್ಯ ಬಡಾವಣೆಯ ಮಂಗನಹಳ್ಳಿ ಕೆರೆ ಬಳಿ ಮನು ಅಡಗಿದ್ದ ಮಾಹಿತಿ ಸಿಕ್ಕಿತ್ತು. ಪಿ.ಎಸ್‌.ಐ ಮೌನೇಶ್ ಬಡಗಿ, ಹೆಡ್ ಕಾನ್‌ಸ್ಟೆಬಲ್‌ ಗಳಾದ ಕುಮಾರ್, ಮಹಾಲಿಂಗಯ್ಯ ಸ್ಥಳಕ್ಕೆ ಹೋಗಿದ್ದರು. ಈ ವೇಳೆ ಆರೋಪಿ ಪೊಲೀಸರ ಮೇಲೆ ಪೆಪ್ಪರ್ ಸ್ಪ್ರೇ ಎರಚಿ ಪರಾರಿಯಾಗಿದ್ದ.

Also Read  ಸಾಲದ ವಿಚಾರವಾಗಿ ಪತಿಯೊಂದಿಗೆ ಗಲಾಟೆ.! ➤ಪತ್ನಿ ಆತ್ಮಹತ್ಯೆ

 

 

error: Content is protected !!
Scroll to Top