ಗ್ರಾಮ ಪಂಚಾಯತ್ ಚುನಾವಣೆಗೆ ದಿನಾಂಕ ನಿಗದಿಯಾದ ಹಿನ್ನೆಲೆ ➤ ಡಿ.06ರ ಒಳಗೆ ಕಡಬ ಠಾಣಾ ವ್ಯಾಪ್ತಿಯಲ್ಲಿ ಕೋವಿ ಹೊಂದಿರುವವರು ಕೋವಿಯನ್ನು ಠಾಣೆಗೆ ತಲುಪಿಸಲು ಸೂಚನೆ

(ನ್ಯೂಸ್ ಕಡಬ) newskadaba.com ಕಡಬ, ನ.30. ರಾಜ್ಯದಲ್ಲಿ ಗ್ರಾಮ ಪಂಚಾಯತ್ ಚುನಾವಣೆಗೆ ದಿನಾಂಕ ಘೋಷಣೆಯಾದ ಹಿನ್ನೆಲೆಯಲ್ಲಿ ಕಡಬ ಠಾಣಾ ವ್ಯಾಪ್ತಿಯ ಗ್ರಾಮಗಳಲ್ಲಿ ಕೋವಿ ಹೊಂದಿರುವವರು ತಮ್ಮಲ್ಲಿರುವ ಕೋವಿಯನ್ನು ಠಾಣೆಗೆ ಹಾಜರುಪಡಿಸುವಂತೆ ಕಡಬ ಎಸ್ ರುಕ್ಮನಾಯ್ಕ್ ತಿಳಿಸಿದ್ದಾರೆ.

ಡಿಸೆಂಬರ್ 05 ರ ಮೊದಲು ಕೋವಿಯನ್ನು ಠಾಣೆಯಲ್ಲಿ ಡೆಪಾಸಿಟ್ ಮಾಡುವಂತೆ ಕಡಬ ಪೊಲೀಸ್ ಠಾಣೆಯ ಪ್ರಕಟಣೆಯಲ್ಲಿ ಸೂಚಿಸಲಾಗಿದೆ.

Scroll to Top