ದೇಶದ ಜನತೆಗೆ ಬಹಿರಂಗ ಪತ್ರ ಬರೆದ ರಾಹುಲ್ ಗಾಂಧಿ…!! ➤ 500 ರೂ.ಗೆ ಗ್ಯಾಸ್ ಸಿಲಿಂಡರ್, ತೈಲ ಬೆಲೆ ಇಳಿಕೆ‌, ಹಲವು ವಿಚಾರಗಳು ಪತ್ರದಲ್ಲಿ ಉಲ್ಲೇಖ..

(ನ್ಯೂಸ್ ಕಡಬ) newskadaba.com   ಹೊಸದಿಲ್ಲಿ, ಜ.14. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ದೇಶದ ಜನತೆಗೆ ಪತ್ರವನ್ನು ಬರೆದಿದ್ದು, ಅಗ್ಗವಾದ ಪೆಟ್ರೋಲ್ ಮತ್ತು ಡೀಸೆಲ್, 500 ರೂ.ಗೆ ಗ್ಯಾಸ್ ಸಿಲಿಂಡರ್, ಉದ್ಯೋಗ ಮತ್ತು ಸೌಹಾರ್ದತೆಯ ಸ್ಥಾಪನೆಯ ಭರವಸೆಯನ್ನು ನೀಡಿದ್ದಾರೆ ಎಂದು ವರದಿಯಾಗಿದೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪಕ್ಷದ ಬೃಹತ್ ಪ್ರಚಾರ ಕಾರ್ಯಕ್ರಮ ಭಾರತ್ ಜೋಡೋ ಯಾತ್ರೆಯ ಕೊನೆಯ ಘಟ್ಟದಲ್ಲಿ ದೇಶದ ಜನತೆಗೆ ಪತ್ರ ಬರೆದಿದ್ದಾರೆ. ಜನವರಿ 26 ರಿಂದ ರಾಹುಲ್ ಗಾಂಧಿಯವರ ಪತ್ರವನ್ನು ಪ್ರತಿ ಮನೆಗೆ ತಲುಪಿಸುವುದಾಗಿ ಪಕ್ಷವು ಪ್ರಕಟಿಸಿದೆ. ಪತ್ರಕ್ಕೆ “ಆಪ್ಕಾ ಅಪ್ನಾ ರಾಹುಲ್ (ನಿಮ್ಮ ಸ್ವಂತ ರಾಹುಲ್) ಎಂದು ಸಹಿ ಮಾಡಲಾಗಿದೆ. ಈ ಪತ್ರವನ್ನು ಎಲ್ಲಾ ಪ್ರಾದೇಶಿಕ ಭಾಷೆಗಳಲ್ಲಿ ಬರೆಯಲಾಗಿದೆ ಎಂದು ತಿಳಿದು ಬಂದಿದೆ.

Also Read  ರಸ್ತೆ ಬದಿ ಮೊಮೋಸ್ ಸೇವಿಸಿ ಮಹಿಳೆ ಮೃತ್ಯು: 22 ಮಂದಿ ಅಸ್ವಸ್ಥ

 

 

error: Content is protected !!
Scroll to Top