ಹೊನ್ನಾವರ: ಪರೇಶ್ ಮೇಸ್ತ ಸಾವಿನ ತನಿಖೆಯನ್ನು NIA ಗೆ ವಹಿಸಲು ಆಗ್ರಹ ► ಕಡಬದ ಹಿಂದೂ ಸಂಘಟನೆಗಳ ವತಿಯಿಂದ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಕಡಬ, ಡಿ.15. ಹೊನ್ನಾವರದ ಹಿಂದೂ ಸಂಘಟನೆಯ ಕಾರ್ಯಕರ್ತ ಪರೇಶ್ ಮೇಸ್ತ ಹತ್ಯೆಯನ್ನು ಖಂಡಿಸಿ ವಿಶ್ವಹಿಂದೂ ಪರಿಷತ್, ಬಜರಂಗದಳ ಕಡಬ ಪ್ರಖಂಡ ಹಾಗೂ ಹಿಂದೂ ಜಾಗರಣ ವೇದಿಕೆ ಕಡಬ ತಾಲೂಕು ಇದರ ನೇತ್ರತ್ವದಲ್ಲಿ ಕಡಬದಲ್ಲಿ ಶುಕ್ರವಾರದಂದು ಪ್ರತಿಭಟನೆ ನಡೆಯಿತು.

ಪ್ರತಿಭಟನೆಯಲ್ಲಿ ಭಾಗವಹಿಸಿ ಸುಳ್ಯ ಶಾಸಕರಾದ ಎಸ್. ಅಂಗಾರ, ಮತೀಯ ಭಯೋತ್ಪಾದಕರು ಅಮಾಯಕ‌ ಹಿಂದೂ ಕಾರ್ಯಕರ್ತರ ಕೊಲೆ ಮಾಡುತ್ತಿದ್ದಾರೆ. ಅದಕ್ಕೆ ರಾಜ್ಯ ಸರಕಾರ ಪ್ರೇರೇಪಣೆ ನೀಡುತ್ತಿದ್ದು, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರಕಾರದ ಆಡಳಿತ ಯಂತ್ರವು ಹದಗೆಟ್ಟು ಹೋಗಿದೆ. ಎಂದರು.

Also Read  ಉಳ್ಳಾಲ: ಕಾಂಗ್ರೆಸ್ ಪ್ರಚಾರದ ವಾಹನ ಚಾಲಕನಿಗೆ ಹಲ್ಲೆ ➤ ಎಸ್ಡಿ ಪಿಐ ಕಾರ್ಯಕರ್ತನ ಬಂಧನ

ಹಿಂದೂ ಸಂಘಟನಾ ಮುಖಂಡ ರವಿರಾಜ್ ಶೆಟ್ಟಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದರು. ಪ್ರಶಾಂತ್ ಪೂಜಾರಿ, ರಾಜು ಮೈಸೂರು, ಕುಟ್ಟಪ್ಪ ಕೊಡಗು, ಶರತ್ ಮಡಿವಾಳ ಸೇರಿದಂತೆ ಹಲವಾರು ಹಿಂದೂ ಕಾರ್ಯಕರ್ತರ ಹತ್ಯೆಯ ತನಿಖೆಯನ್ನು ರಾಜ್ಯ ಸರ್ಕಾರವು ಕೂಡಲೇ NIA ಗೆ ಒಪ್ಪಿಸುವಂತೆ ಆಗ್ರಹಿಸಿ ಪ್ರತಿಭಟಿಸಲಾಯಿತು.

error: Content is protected !!
Scroll to Top