ಹೈಕೋರ್ಟ್ ನ್ಯಾಯಾಧೀಶರಾಗಿ ವೆಂಕಟೇಶ ನಾಯಕ್ ನೇಮಕ..! 

(ನ್ಯೂಸ್ ಕಡಬ) newskadaba.com  ಸಿಂಧನೂರು, ಜ.12. ನ್ಯಾಯಾಧೀಶರಾಗಿದ್ದ ವೆಂಕಟೇಶ ನಾಯಕ್ ಹೈಕೋರ್ಟ್ ನ್ಯಾಯಾಧೀಶರಾಗಿ ನೇಮಕಗೊಂಡ ಸುದ್ದಿ ತಿಳಿದು, ವಕೀಲರು ಸಿಹಿ ಹಂಚುವ ಮೂಲಕ ಸಂಭ್ರಮ ಆಚರಿಸಿಕೊಂಡರು.


ನಗರದ ನ್ಯಾಯಾಲಯದ ಆವರಣದಲ್ಲಿ ಸಭೆ ನಡೆಸಿದ ನ್ಯಾಯವಾದಿಗಳು ಹಿಂದೆ ಸಿಂಧನೂರು ನ್ಯಾಯಾಲಯದ ನ್ಯಾಯಾಧೀಶರಾಗಿ ಕೆಲಸ ಮಾಡಿದ್ದು, ಈಗ ಹೈಕೋರ್ಟ ನ್ಯಾಯಾಧೀಶರಾಗಿ ನೇಮಕಗೊಂಡಿದ್ದು ನಮಗೆ ಸಂತೋಷ ತಂದಿದೆ ಎಂದು ಹಲವಾರು ವಕೀಲರು ಮಾತನಾಡಿ ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸಿದರು.
ಸಿಂಧನೂರು ನ್ಯಾಯಾಲಯದಲ್ಲಿ ವೆಂಕಟೇಶ ನಾಯಕ ಕರ್ತವ್ಯ ನಿರ್ವಹಿಸುತ್ತಿದ್ದಾಗ ಅವರ ಕೆಲಸ ಕಾರ್ಯಗಳನ್ನು ನೋಡಿ ಮುಂದಿನ ದಿನಗಳಲ್ಲಿ ಅವರು ಉನ್ನತ ಸ್ಥಾನಕ್ಕೆ ಹೋಗುತ್ತಾರೆಂದು ಹಿರಿಯ ವಕೀಲರು ಮಾತಾನಾಡಿ ಕೊಳ್ಳುತ್ತಿದ್ದರು ಅವರು ಅಂದು ಕೊಂಡಂತೆ ನಾಯಕರು ಹೈಕೋರ್ಟ್ ನ್ಯಾಯಾಧೀಶರಾಗಿ ನೇಮಕಗೊಂಡಿದ್ದಾರೆ ಎಂದು ವಕೀಲರ ಸಂಘದ ತಾಲೂಕಾ ಅಧ್ಯಕ್ಷರಾದ ಕೆ.ಬೀಮನಗೌಡ ಮಾತನಾಡಿದರು.

Also Read  ಭಾರತದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ವಿಚಾರದಲ್ಲಿ ಸರಕಾರದಿಂದ ತಾರತಮ್ಯ ➤  ಮಾನವಹಕ್ಕುಗಳ ಕಣ್ಗಾವಲು ಸಂಸ್ಥೆ ಕಳವಳ !                                   


ಹಿರಿಯಶ್ರೇಣಿಯ ಸಿವಿಲ್. ನ್ಯಾಯಾಧೀಶರಾದ ದೀಪ ಮನೇರಕರ, ನ್ಯಾಯಾಧೀಶರಾದ ಕೋಟೆಪ್ಪ, ಆಚಪ್ಪ,ದೊಡ್ಡ ಬಸವರಾಜ ವಕೀಲಾದ ಜಿ.ಎಸ್‌ಆರ್, ರೆಡ್ಡಿ, ಕೆ ಅಮರೆಗೌಡ, ಸೇರಿದತೆ ಇತರ ವಕೀಲರು ಸಭೆಯಲ್ಲಿ ಪಾಲ್ಗೊಂಡು ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸಿ ಮಾತನಾಡಿದರು.

 

 

error: Content is protected !!
Scroll to Top