ಜ.15 ರಂದು ವಿವೇಕ ರಥ ಕಡಬಕ್ಕೆ..! ➤  ಅದ್ದೂರಿ ಸ್ವಾಗತಕ್ಕೆ ನಿರ್ಧಾರ  

(ನ್ಯೂಸ್ ಕಡಬ) newskadaba.com  ಕಡಬ, ಜ.12.  ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆಯ ಪ್ರಯುಕ್ತ ಯುವ ಸಪ್ತಾಹ ಕಾರ್ಯಕ್ರಮವನ್ನು ಜನವರಿ 15 ರಂದು ಕಡಬದಲ್ಲಿ  ಆಚರಿಸಲು ನಿರ್ಧರಿಸಲಾಗಿದ್ದು, ಕಡಬ ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ ಶಿವಪ್ರಸಾದ್ ರೈ ಮೈಲೇರಿ ತಿಳಿಸಿದರು ಎಂದು ವರದಿ ತಿಳಿಸಿದೆ. ಕಡಬದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯಾಧ್ಯಂತ ಯುವ ಸಪ್ತಾಹ ಕಾರ್ಯಕ್ರಮ ನಡೆಯುತ್ತಿದ್ದು, ಇದರ ಭಾಗವಾಗಿ ವಿವೇಕ ರಥ  ಯುವ ಪಥ  ಜಿಲ್ಲೆಯಾದ್ಯಂತ ಸಂಚರಿಸಲಿದ್ದು, ರಥವು ಜನವರಿ 15 ರಂದು ಕಡಬಕ್ಕೆ ಆಗಮಿಸಲಿದ್ದು ರಥಕ್ಕೆ ಆದ್ಧೂರಿ ಸ್ವಾಗತ ನೀಡಲಾಗುತ್ತಿದೆ.

ಹೊಸಮಠದಲ್ಲಿ ರಥವನ್ನು ಅಧ್ದೂರಿಯಾಗಿ ಸ್ವಾಗತಿಸಲಾಗುವುದು, ಬಳಿಕ ಕಡಬ ಪೇಟೆಯಲ್ಲಿ ಮೆರವಣಿಗೆಯಲ್ಲಿ ಸಾಗಿ, ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ತಾನದ  ಸಭಾಭವನದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ ಎಂದರು. ಸಚಿವ ಎಸ್.ಅಂಗಾರ  ಕಾರ್ಯಕ್ರಮ ಉದ್ಘಾಟಿಸಲಿದ್ದು, ಕಡಬ  ತಹಸೀಲ್ದಾರ್  ರಮೇಶ್ ಬಾಬು.ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ವಿವಿಧ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು,  ಅತಿಥಿಗಳಾಗಿ ಭಾಗವಹಿಲಿದ್ದಾರೆ ಎನ್ನಲಾಗಿದೆ.

Also Read  ಉದ್ಯಾವರ: ಮೂವರು ವಿದ್ಯಾರ್ಥಿಗಳು ನೀರು ಪಾಲು

 

error: Content is protected !!
Scroll to Top