ಮಂಗಳೂರು ಸೇರಿದಂತೆ ಏಳು ನಗರಗಳಲ್ಲಿ ಜಿಯೊ ಟ್ರೂ 5ಜಿ ಸೇವೆ ಆರಂಭ..!                                       

(ನ್ಯೂಸ್ ಕಡಬ)newskadaba.com  ಮಂಗಳೂರು, ಜ.11. ಮಂಗಳೂರು ಮತ್ತು ಇತರ ಏಳು ನಗರಗಳಲ್ಲಿ ರಿಲಯನ್ಸ್ ಜಿಯೋ ಟ್ರೂ 5ಜಿ ಸೇವೆಗಳನ್ನು ಆರಂಭಿಸಿದ್ದು, ರಿಲಯನ್ಸ್ ಜಿಯೋ ಮಂಗಳೂರಿನಲ್ಲಿ 5ಜಿ ಸೇವೆಗಳನ್ನು ಆರಂಭಿಸಿದ ಮೊದಲ ಮತ್ತು ಏಕೈಕ ಆಪರೇಟರ್ ಆಗಿದೆ ಎಂದು ವರದಿ ಪ್ರಕಟಣೆ ತಿಳಿಸಿದೆ.

ಜಿಯೊ ಗ್ರಾಹಕರು 5 ಜಿ ವೆಲ್‍ಕಮ್ ಆಫರ್ ನಡಿ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ 1 ಜಿಬಿಪಿಎಸ್+ ವೇಗದಲ್ಲಿ ಅನಿಯಮಿತ ಡೇಟಾವನ್ನು ಇಂದಿನಿಂದ ಪಡೆಯಬಹುದಾಗಿದೆ ಎಂದು ಜಿಯೋ ವಕ್ತಾರರು ಪ್ರಕಟಣೆಯಲ್ಲಿ ಹೇಳಿದ್ದಾರೆ ಎನ್ನಲಾಗಿದೆ.

ಇನ್ನು ಮಂಗಳೂರು ನಮ್ಮ ದೇಶದ ಪ್ರಮುಖ ಪ್ರವಾಸೋದ್ಯಮ ಕೇಂದ್ರ ಮತ್ತು ಪ್ರಮುಖ ಶಿಕ್ಷಣ ಕೇಂದ್ರವಾಗಿದ್ದು, ಜಿಯೋದ ಟ್ರೂ 5ಜಿ ಸೇವೆಗಳ ಪ್ರಾರಂಭದೊಂದಿಗೆ, ಈ ಪ್ರದೇಶದ ಗ್ರಾಹಕರು ಕೇವಲ ಉತ್ತಮ ದೂರಸಂಪರ್ಕ ಜಾಲವನ್ನು ಪಡೆಯುತ್ತಾರಷ್ಟೇ ಅಲ್ಲ, ಜತೆಗೆ ಇ-ಆಡಳಿತ, ಶಿಕ್ಷಣ, ಆಟೋಮೇಷನ್, ಕೃತಕ ಬುದ್ಧಿಮತ್ತೆ, ಗೇಮಿಂಗ್, ಆರೋಗ್ಯ, ಕೃಷಿ, ಐಟಿ ಕ್ಷೇತ್ರಗಳಲ್ಲಿ ಮತ್ತು ಎಸ್‍ಎಂಇಗಳು ಅನಂತ ಬೆಳವಣಿಗೆಯ ಅವಕಾಶಗಳನ್ನು ಪಡೆಯುತ್ತವೆ ಎಂದು ವರದಿಯಾಗಿದೆ.

Also Read  ಚಿನ್ನದ ದರದಲ್ಲಿ ಮತ್ತೆ ಏರಿಕೆ

 

 

 

error: Content is protected !!
Scroll to Top