ನೀರಿನ ಹೊಂಡಕ್ಕೆ ಬಿದ್ದು ಬಾಲಕ ಮೃತ್ಯು..!!

Death, deadbody, Waterfall

(ನ್ಯೂಸ್ ಕಡಬ) newskadaba.com ಬೈಂದೂರು, ಜ.11.   ನೀರಿನ ಹೊಂಡಕ್ಕೆ ಬಿದ್ದು ಬಾಲಕನೋರ್ವ ಮೃತಪಟ್ಟ ಘಟನೆ ಬೈಂದೂರು ತಾಲೂಕಿನ ಯಡ್ತರೆ ಗ್ರಾಮದ ಮದ್ದೋಡಿ ಎಂಬಲ್ಲಿ ವರದಿಯಾಗಿದೆ.

ಮೃತ ಬಾಲಕನನ್ನು ಸುರೇಶ್ ಬಹುದೋರು ಎಂಬವರ ಮಗ ಅನಿಲ್ (7) ಎಂದು ಗುರುತಿಸಲಾಗಿದೆ.

ಸುರೇಶ್ ರವರ ಹೆಂಡತಿ ಬಟ್ಟೆ ತೊಳೆಯಲು ಮದ್ದೋಡಿ ಹೊಳೆಗೆ ಹೋದಾಗ ಅನಿಲ್ ಕೂಡ ತಾಯಿಯ ಜೊತೆ ಹೋಗಿದ್ದಾನೆ. ಆಗ ಅನಿಲ್ ನನ್ನು ಹೊಳೆ ಬದಿಯಿಂದ ವಾಪಾಸು ಮನೆಗೆ ಹೋಗುವಂತೆ ಮೃತ ಬಾಲಕನ ತಾಯಿ ಹೇಳಿದ್ದಾರೆ. ಬಟ್ಟೆ ಒಗೆಯುವ ಸ್ಥಳದಿಂದ ಸ್ವಲ್ಪ ದೂರದ ಚಿಕ್ಕ ನೀರಿನ ಗುಂಡಿಗೆ ಆಕಸ್ಮಿಕವಾಗಿ ಬಿದ್ದು  ಅನಿಲ್ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಈ ಬಗ್ಗೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Scroll to Top