ಗೋಡಂಬಿ ಬಳಸಿ ಮಾಡಿ ರುಚಿಯಾದ ಚಿಕನ್ ಗ್ರೇವಿ ➤ ಚಿಕನ್ ಗ್ರೇವಿ ಮಾಡುವ ವಿಧಾನ….     

(ನ್ಯೂಸ್ ಕಡಬ)newskadaba.com  ಜ.10. ಚಿಕನ್‌ ಎಂದರೆ ನಾನ್‌ವೆಜ್‌ ಪ್ರಿಯರ ಲಿಸ್ಟ್‌ನಲ್ಲಿ ಬರುವ ಮೊದಲ ಹೆಸರು. ಇದನ್ನು ಭಿನ್ನ ವಿಭಿನ್ನ ರೀತಿಯಲ್ಲಿ ಬಳಸಿ ಅಡುಗೆ ಮಾಡುವುದರಿಂದಲೇ ಹೊಸ ಹೊಸ ರುಚಿಗಳ ಅನುಭವವೂ ನಮಗಾಗುತ್ತದೆ. ನಾವಿಂದು ಒಂದು ಡಿಫರೆಂಟ್‌ ಸ್ಟೈಲ್‌ನಲ್ಲಿ ಚಿಕನ್‌ ಗ್ರೇವಿ ಮಾಡೋದು ಹೇಗೆಂದು ತಿಳಿದುಕೊಳ್ಳೋಣ. ಗೋಡಂಬಿ ಸೇರಿಸಿ ರುಚಿಯಾದ ಚಿಕನ್‌ ಗ್ರೇವಿ ನೀವು ಕೂಡಾ ಒಮ್ಮೆ ಮಾಡಿ ನೋಡಿ.

ಬೇಕಾಗುವ ಸಾಮಗ್ರಿಗಳು:
* ಚಿಕನ್ – ಅರ್ಧ ಕೆಜಿ
* ಕೆಂಪು ಮೆಣಸಿನಕಾಯಿ – 8
* ಈರುಳ್ಳಿ – 2
* ಟೊಮೆಟೊ – 2
* ಗೋಡಂಬಿ – 2 ಟೀಸ್ಪೂನ್,
* ಅರಿಶಿನ – ಅರ್ಧ ಟೀಸ್ಪೂನ್
* ಅಡುಗೆ ಎಣ್ಣೆ – ‌ ಅರ್ಧ ಕಪ್
* ಉಪ್ಪು – ರುಚಿಗೆ ತಕ್ಕಷ್ಟು
* ದನಿಯಾ ಪುಡಿ – 1 ಟೀಸ್ಪೂನ್
* ಗರಂ‌ ಮಸಾಲ – 1 ಟೀಸ್ಪೂನ್‌
* ಕಸೂರಿ ಮೇಥಿ – ಅರ್ಧ ಟೀಸ್ಪೂನ್‌
* ಶುಂಠಿ, ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್

Also Read  ಬಿಸಿಲಿನ ಬೇಗೆಗೆ ತಂಪು ಪಾನೀಯದ ಇಂಪು ➤ ಡ್ರೈ ಫ್ರೂಟ್ಸ್ ಮಿಲ್ಕ್ ಶೇಕ್ ಮಾಡುವ ವಿಧಾನ 

ಮಾಡುವ ವಿಧಾನ:
* ಮೊದಲಿಗೆ ಮಸಾಲೆ ಮಾಡಲು ನೆನೆಸಿದ ಒಣ ಮೆಣಸಿನಕಾಯಿ ಟೊಮೆಟೋ ಮತ್ತು ಗೋಡಂಬಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು.

* ಒಂದು ಬಾಣಲೆಯನ್ನು ಬಿಸಿಗೆ ಇಟ್ಟು ಅಡುಗೆ ಎಣ್ಣೆ ಹಾಕಿ ಈರುಳ್ಳಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಒಂದು ನಿಮಿಷ ಬೇಯಿಸಿಕೊಳ್ಳಬೇಕು.

* ನಂತರ ತೊಳೆದಿಟ್ಟ ಚಿಕನ್ ಸೇರಿಸಿ ಅದಕ್ಕೆ ಅರಿಶಿನ, ಉಪ್ಪು, ಕೆಂಪು ಮೆಣಸಿನ ಪುಡಿ, ಕೊತ್ತಂಬರಿ ಪುಡಿ ಹಾಕಿ, ಚಿಕನ್ ಅರ್ಧ ಬೇಯುವವರೆಗೂ ಎಣ್ಣೆಯಲ್ಲಿ ಫ್ರೈ ಮಾಡಿ.

* ಈಗ ರುಬ್ಬಿದ ಮಸಾಲೆಯನ್ನು ಸೇರಿಸಿ ಎಣ್ಣೆ ಬಿಡುವವರೆಗೂ ಬೇಯಿಸಿ. ಕೊನೆಯಲ್ಲಿ ಗರಂ ಮಸಾಲೆ, ಕಸೂರಿ ಮೇಥಿ, ಕೊತ್ತಂಬರಿ ಸೊಪ್ಪು ಹಾಗೂ ಅರ್ಧ ಲೋಟ ನೀರು ಸೇರಿಸಿ ಕುದಿಸಿಕೊಂಡರೆ ರೆಸ್ಟೋರೆಂಟ್ ಸ್ಟೈಲ್ ಚಿಕನ್ ಸಿದ್ಧವಾಗುತ್ತದೆ.

Also Read  ದ.ಕ. ಜಿಲ್ಲೆಯಲ್ಲಿ ಇಳಿಮುಖದತ್ತ ಕೋವಿಡ್ -19 ಕೇಸ್

.

 

error: Content is protected !!
Scroll to Top