ಸುಬ್ರಮಣ್ಯ:  ಮಾ.12ರಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯಲಿದೆ ಸಾಮೂಹಿಕ ವಿವಾಹ                                

(ನ್ಯೂಸ್ ಕಡಬ)newskadaba.com  ಸುಬ್ರಹ್ಮಣ್ಯ, ಜ.09. ರಾಜ್ಯದ ಪ್ರಸಿದ್ಧ ನಾಗಾರಾಧನೆಯ ಶ್ರದ್ಧಾ ಕೇಂದ್ರವಾಗಿರುವ ರಾಜ್ಯ ಸರಕಾರದ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಬರುವ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಾ.12ರಂದು ಸರಳ ಸಾಮೂಹಿಕ ವಿವಾಹ ನಡೆಯಲಿದೆ ಎಂದು ತಿಳಿದುಬಂದಿದೆ.
ಸಾಮೂಹಿಕ ವಿವಾಹವಾಗಲು ಬಯಸುವವರು ದೇವಳದ ಕಚೇರಿಯಿಂದ ಅರ್ಜಿ ಫಾರಂ ಪಡೆದು ತಮ್ಮ ಅರ್ಜಿಯನ್ನು ದೇವಳಕ್ಕೆ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ ದೇವಳದ ಕಚೇರಿ ವೇಳೆಯಲ್ಲಿ ಖುದ್ದಾಗಿ ಭೇಟಿ ನೀಡಿ ಅಥವಾ ದೂರವಾಣಿ ಕರೆ (08257- 281224) ಮೂಲಕ ಮಾಹಿತಿ ಪಡೆದುಕೊಳ್ಳಬಹುದು ಎಂದು ಪ್ರಕಟಣೆ ತಿಳಿಸಿದೆ. ಕಳೆದ ವರ್ಷ ಮೇ 25 ಮತ್ತು ಆಗಸ್ಟ್ 25ರಂದು ಮತ್ತು ಮೇ ಕುಕ್ಕೆ ದೇವಸ್ಥಾನದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ನೆರವೇರಿತ್ತು ಎಂದು ವರದಿಯಾಗಿದೆ.

Also Read  ಇಲಿ ಪಾಷಾಣ ಸವರಿಟ್ಟಿದ್ದ ಹಣ್ಣು ತಿಂದು ಯುವತಿ ಮೃತ್ಯು..!

 

 

error: Content is protected !!
Scroll to Top