ಬೀದಿ ಬಳಿ ಮಲಗಿದ್ದ ಬಿಕ್ಷುಕಿಯನ್ನು ಕಚ್ಚಿ ಎಳೆದಾಡಿ ಕೊಂದು ಹಾಕಿದ ಬೀದಿ ನಾಯಿಗಳು ..!!

(ನ್ಯೂಸ್ ಕಡಬ) newskadaba.com ಧಾರವಾಡ, ಜ.10.  ಭಿಕ್ಷೆ ಬೇಡುತ್ತ, ಜನ ಕೊಟ್ಟಿದ್ದನ್ನು ತಿಂದು, ಎಲ್ಲೆಂದರಲ್ಲಿ ಮಲಗಿ ಅನಾಥವಾಗಿ ಜೀವನ ಸಾಗಿಸುತ್ತಿದ್ದ ಭಿಕ್ಷುಕಿಯ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿ ಕೊಂದು ಹಾಕಿರುವ ಅಮಾನವೀಯ ಘಟನೆ ಧಾರವಾಡ ಜಿಲ್ಲೆಯ ಉಪ್ಪಿನ ಬೆಟಗೇರಿ ಗ್ರಾಮದಲ್ಲಿ ವರದಿಯಾಗಿದೆ.

ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದಲ್ಲಿ ಮಲಗಿದ್ದ ಭಿಕ್ಷುಕಿ ಮೇಲೆ ಬೀದಿ ನಾಯಿಗಳು ದಾಳಿ ಮಾಡಿ ಕಚ್ಚಿ ಎಳೆದಾಡ ಪರಿಣಾಮ ಭಿಕ್ಷುಕಿ ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ ಎನ್ನಲಾಗಿದೆ. ಗ್ರಾಮದ ಖಬರಸ್ತಾನ್ ಬಳಿ ಶವ ಪತ್ತೆಯಾಗಿದ್ದು ಘಟನಾ ಸ್ಥಳಕ್ಕೆ ಗರಗ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಾಯಿ ದಾಳಿಗೆ ಮೃತಪಟ್ಟ ಭಿಕ್ಷುಕಿ ಹೆಸರು, ವಿಳಾಸ ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ.

Scroll to Top