ಬೆಂಗಳೂರು ಇತಿಹಾಸ ಹೇಳಲಿದೆ ಈ ಬಾರಿಯ ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನ

(ನ್ಯೂಸ್ ಕಡಬ)newskadaba.com  ಬೆಂಗಳೂರು, ಜ.10. ಈ ಬಾರಿಯ ಗಣರಾಜ್ಯೋತ್ಸ ದಿನದ ಫಲಪುಷ್ಪ ಪ್ರದರ್ಶನದಲ್ಲಿ ಜನತೆಗೆ ಶೈಕ್ಷಣಿಕ ಅನುಭವ ನೀಡಲು ತೋಟಗಾರಿಕಾ ಇಲಾಖೆಯು ಮುಂದಾಗಿದ್ದು, ಬೆಂಗಳೂರು ಇತಿಹಾಸವನ್ನು ಥೀಮ್ ಆಗಿ ಬಳಸಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.

ತಜ್ಞರ ಸಲಹೆಯ ಮೇರೆಗೆ ಈ ಬಾರಿಯ ಪುಷ್ಪ ಪ್ರದರ್ಶನದ ಥೀಮ್ ಬೆಂಗಳೂರಿನ ಇತಿಹಾಸವನ್ನು ಥೀಮ್ ಆಗಿ ತೆಗೆದುಕೊಳ್ಳಲು ಇಲಾಖೆ ನಿರ್ಧರಿಸಿದ್ದು, ಇಲಾಖೆಯು 1500 ಎಡಿ ಯಿಂದ ಇತಿಹಾಸವನ್ನು ಪ್ರದರ್ಶಿಸಲಿದೆ. ವಿವಿಧ ರಾಜವಂಶಗಳ ಆಳ್ವಿಕೆಯಲ್ಲಿ ನಗರವು ಹೇಗೆ ಬೆಳೆಯಿತು ಮತ್ತು ಹೇಗೆ ರೂಪುಗೊಂಡಿತು ಎಂಬುದನ್ನು ಈ ಫಲಪುಷ್ಪ ಪ್ರದರ್ಶನ ವಿವರಿಸುತ್ತದೆ.

ಈ ಬಾರಿ ಎಲ್ಲಾ ಪ್ರವಾಸಿಗರಿಗೆ ಫಲಪುಷ್ಪ ಪ್ರದರ್ಶನವು ಶೈಕ್ಷಣಿಕ ಪ್ರವಾಸವಾಗಲಿದೆ ಎಂದು ತೋಟಗಾರಿಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಹೇಳಿದ್ದಾರೆ.

 

 

error: Content is protected !!

Join the Group

Join WhatsApp Group