ಹಿಟ್ ಆ್ಯಂಡ್ ರನ್ ಪ್ರಕರಣ ➤  ಆರೋಪಿ ಟೆಕ್ಕಿ ಬಂಧನ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ.08.  ಹಿಟ್ ಆ್ಯಂಡ್ ರನ್ ಪ್ರಕರಣವೊಂದರಲ್ಲಿ ಇಬ್ಬರು ಮಹಿಳೆಯರ ಸಾವಿಗೆ ಕಾರಣನಾಗಿದ್ದ ಟೆಕ್ಕಿಯೊಬ್ಬನನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಗುಂಟೂರು ಮೂಲದ ಸಾಫ್ಟ್ ವೇರ್ ಎಂಜಿನಿಯರ್ ಬಯ್ಯ ವೆಂಕಟ ಸಂತೋಷ್ ಅಭಿರಾಮ್ ನನ್ನು ಬಂಧನಕ್ಕೊಳಪಡಿಸಿರುವ ಕೆ.ಆರ್.ಪುರಂ ಸಂಚಾರಿ ಪೊಲೀಸರು, ಆತನಿಂದ ಇನ್ನೋವಾ ಕಾರನ್ನು ವಶಕ್ಕೆ ಪಡೆದುಕೊಂದಿದ್ದಾರೆ ಎನ್ನಲಾಗಿದೆ.

ಅತೀವೇಗವಾಗಿ ಕಾರು ಚಲಾಯಿಸಿಕೊಂಡು ಬಂದಿರುವ ಸಂತೋಷ್, ಆಟೋಗೆ ಗುದ್ದಿಸಿ ಪರಾರಿಯಾಗಿದ್ದ. ಇದರಿಂದ ಹಜೀರಾ (40) ಮತ್ತು ಅವರ ಸೊಸೆ ಹಸೀನಾ ಮೃತಪಟ್ಟಿದ್ದರು ಎಂದು ವರದಿಯಾಗಿದೆ. ಆಟೋದಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಬಾಲಕಿಯರು ಹಾಗೂ ಹಸೀನಾ ಅವರ ಪತಿಗೆ ಗಂಭೀರ ಗಾಯಗಳಾಗಿದ್ದವು. ಗಾಯಗೊಂಡವರನ್ನು ಸುಮಯ್ಯ (5) ಮತ್ತು ಸಾದಿಯಾ (3), ಆಟೋ ಚಾಲಕ ಹಸೀನಾಳ ಪತಿ ಖಾಲಿದ್ ಖಾನ್ (39) ಎಂದು ಗುರುತಿಸಲಾಗಿದೆ.

Also Read  ವಿಷ ಸೇವಿಸಿ ಸ್ಯಾಂಡಲ್ ವುಡ್ ನಟಿ ಆತ್ಮಹತ್ಯೆ ➤ ಪ್ರೀತಿಸಿ ಮೋಸ ಹೋದ ಕನ್ನಡ ಕಿರುತೆರೆ ನಿರೂಪಕಿ

 

 

error: Content is protected !!
Scroll to Top