(ನ್ಯೂಸ್ ಕಡಬ) newskadaba.com ಹಾವೇರಿ, ಜ.08. ಮಕ್ಕಳಿಗೆ ಪುಸ್ತಕ, ಸಾಹಿತ್ಯದ ಗೀಳು ಹಚ್ಚದಿದ್ದರೆ, ಮೊಬೈಲ್ ಮೊದಲ ಪಾಠ ಶಾಲೆ, ಗೂಗಲ್ ಮೊದಲ ಗುರು ಆಗಲಿದೆ ಎಂದು ಹಿರಿಯ ಸಾಹಿತಿ ಡುಂಡಿರಾಜ್ ಆತಂಕ ವ್ಯಕ್ತಪಡಿಸಿದರು.
86ನೇ ಅ.ಭಾ. ಕನ್ನಡ ಸಾಹಿತ್ಯ ಸಮ್ಮೇಳನದ ಪಾಪು-ಚಂಪಾ ವೇದಿಕೆಯಲ್ಲಿ ನಡೆದ ಮಕ್ಕಳ ಸಾಹಿತ್ಯ-ಮನೋವಿಕಾಸ ಕುರಿತ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಕ್ಕಳ ಆಸಕ್ತಿ, ಸಂತೋಷ, ಉಲ್ಲಾಸ ಆಧರಿಸಿ ನಾವು ಸಾಹಿತ್ಯ ರಚನೆ ಮಾಡಬೇಕಿದೆ. ಮಕ್ಕಳಿಗೆ ದುಬಾರಿ ಮೊಬೈಲ್, ಟ್ಯಾಬ್‌ಗಳನ್ನು ಕೊಡಿಸುವ ನಾವು, ಅವರಿಗೆ ಆಸಕ್ತಿಕರ ಪುಸ್ತಕ, ಪತ್ರಿಕೆಗಳನ್ನು ಕೊಡಿಸುತ್ತಿಲ್ಲ. ಹಾಗಾಗಿ ಮುಂದೆ ಮಕ್ಕಳು, ಮೊಬೈಲ್ ಮೊದಲ ಪಾಠ ಶಾಲೆ, ಗೂಗಲ್ ಮೊದಲ ಗುರು ಎಂದು ಭಾವಿಸಲಿದ್ದಾರೆ ಎಂದು ಸಲಹೆ ನೀಡಿದರು.