ಶ್ರೀ ರಾಮ ಸೇನೆಯ ನಾಯಕನಿಗೆ ಗುಂಡಿನ ದಾಳಿ..!

(ನ್ಯೂಸ್ ಕಡಬ) newskadaba.com  ಬೆಳಗಾವಿ, ಜ.08. ಶ್ರೀರಾಮ ಸೇನೆಯ ಜಿಲ್ಲಾ ನಾಯಕನ ಮೇಲೆ ಗುಂಡಿನ ದಾಳಿ ನಡೆಸಿರುವ ಘಟನೆ ತಾಲೂಕಿನ ಹಿಂಡಲಗಾ ಗ್ರಾಮದ ಮರಾಠಿ ಶಾಲೆಯ ಎದುರು ಸಂಭವಿಸಿದೆ ಎನ್ನಲಾಗಿದೆ.

ಶ್ರೀರಾಮ ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ರವಿ ಹಾಗೂ ಹಿಂದೂ ರಾಷ್ಟ್ರ ಸೇನಾ ಮುಖಂಡ ಮನೋಜ್ ಗುಂಡೇಟಿನಿಂದ ಗಾಯಗೊಂಡಿದ್ದಾರೆ. ಗಾಯಗೊಂಡ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ. ರವಿ ಹಾಗೂ ಅವರ ಮನೋಜ್‌ ರಾತ್ರಿ 8ರ ಸುಮಾರಿಗೆ ಕಾರಿನಲ್ಲಿ ತೆರಳುತ್ತಿದ್ದಾಗ ಇಬ್ಬರು ಬೈಕ್‌ ನಲ್ಲಿ ಬಂದು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.

Also Read  ರಸ್ತೆ ದಾಟುವಾಗ ವೃದ್ಧನಿಗೆ ಬಸ್ ಢಿಕ್ಕಿ  ➤ ಪ್ರಾಣಪಾಯದಿಂದ ಪಾರು          

error: Content is protected !!
Scroll to Top