ವಿಟ್ಲ: ಮಾದಕ ವಸ್ತು ಸೇವನೆ..! ➤  ಆರೋಪಿಗಳು ಅರೆಸ್ಟ್…

crime, arrest, suspected

(ನ್ಯೂಸ್ ಕಡಬ) newskadaba.com  ವಿಟ್ಲ, ಜ.08. ಮಾದಕ ವಸ್ತು ಸೇವಿಸಿದ ಆರೋಪದಡಿ ವಿಟ್ಲದ ಕೊಳ್ನಾಡು ಗ್ರಾಮದ ಬೊಳ್ಪಾದೆಯಲ್ಲಿ ಇಬ್ಬರನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಬಂಧಿತ ಆರೋಪಿಗಳನ್ನು ಅಬೂಬಕ್ಕರ್ ಸಿದ್ದೀಕ್ (30), ಕಬೀರ್ (30) ಎಂದು ಗುರುತಿಸಲಾಗಿದೆ.

ವಿಟ್ಲ ಪೇಟೆಯಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಉಪನಿರೀಕ್ಷಕ ಸಂದೀಪ್ ಕುಮಾರ್ ಶೆಟ್ಟಿ ಅವರಿಗೆ ದೊರೆತ ಖಚಿತ ಮಾಹಿತಿ ಹಿನ್ನಲೆಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ ಎನ್ನಲಾಗಿದೆ. ಆಟದ ಮೈದಾನದಲ್ಲಿ ಇಬ್ಬರು ಯುವಕರು ಮಾದಕ ದ್ರವ್ಯ ಸೇವನೆ ಮಾಡಿ ಅನುಚಿತವಾಗಿ ವರ್ತಿಸಿರುವುದು ಪೊಲೀಸರ ಗಮನಕ್ಕೆ ಬಂದಿತ್ತು.

Also Read  ಸುಳ್ಯ ವಿಧಾನಸಭಾ ಕ್ಷೇತ್ರದ ಪ್ರಧಾನಕಾರ್ಯದರ್ಶಿಯಾಗಿ ► ಸುಧೀರ್ ದೇವಾಡಿಗ ಬಲ್ಯ ನೇಮಕ

ಪೊಲೀಸರು ದಾಳಿ ನಡೆಸಿದ ಸಂದರ್ಭ ಆರೋಪಿಗಳು ಅಮಲಿನಲ್ಲಿ ಅನುಚಿತವಾಗಿ ವರ್ತಿಸುತ್ತಿದ್ದರು ಎನ್ನಲಾಗಿದೆ. ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಮಾದಕ ವಸ್ತು ಗಾಂಜಾ ಸೇವನೆ ಮಾಡಿರುವ ಬಗ್ಗೆ ದೃಢಪಟ್ಟಿದೆ.  ಈ ಕುರಿತು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ವರದಿ ತಿಳಿಸಿದೆ.

 

error: Content is protected !!
Scroll to Top