ಮೆಗ್ಗಾನ್ ಆಸ್ಪತ್ರೆಗೆ ಲೋಕಾಯುಕ್ತ ನ್ಯಾಯಮೂರ್ತಿ ಪಾಟೀಲ್ ದಿಢೀರ್ ಭೇಟಿ ➤ ಆಸ್ಪತ್ರೆ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ..!!

(ನ್ಯೂಸ್ ಕಡಬ)newskadaba.com  ಶಿವಮೊಗ್ಗ, ಜ.07. ಶಿವಮೊಗ್ಗ ಜಿಲ್ಲೆಯ ಮೆಗ್ಗಾನ್ ಆಸ್ಪತ್ರೆಗೆ  ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಆಸ್ಪತ್ರೆಯ ಹೆರಿಗೆ ಮತ್ತು ಸ್ತ್ರೀರೋಗ ವಿಭಾಗಕ್ಕೆ ಭೇಟಿ ನೀಡಿ  ಮಕ್ಕಳ ಪಾಲಕರನ್ನು ವಿಚಾರಿಸಿದರು. ಈ ವೇಳೆ ಆಸ್ಪತ್ರೆ ಅವ್ಯವಸ್ಥೆ ಬಗ್ಗೆ ಮಕ್ಕಳ ಪಾಲಕರು ದೂರು ನೀಡಿದ್ದಾರೆ. ಸಿಬ್ಬಂದಿ ಸ್ಪಂದಿಸುತ್ತಿಲ್ಲವೆಂದು ಆರೋಪಿಸಿದ್ದಾರೆ. ಜೊತೆಗೆ ಕಳಪೆ ಆಹಾರ ಕೊಡುತ್ತಿದ್ದಾರೆಂದು ಆರೋಪಿಸಿದ್ದು, ಆಸ್ಪತ್ರೆ ವಾತಾವರಣ ಕಂಡು ಗರಂ ಆದ ಲೋಕಾಯುಕ್ತರು ಹಳೇ ಕಟ್ಡಡ ನಿರ್ವಹಣೆ ಇಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು. ಜೊತೆಗೆ ಮುಂದಿನ ಭೇಟಿಯೊಳಗೆ ಕಟ್ಟಡ ದುರಸ್ತಿ ಆಗಿರಬೇಕೆಂದು ವೈದ್ಯರಿಗೆ  ಲೋಕಾಯುಕ್ತ  ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಖಡಕ್ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

Also Read  ಖೋಟಾ ನೋಟು ಜಾಲ ಪತ್ತೆ  !! ➤  ಖತರ್ನಾಕ್ ಗ್ಯಾಂಗ್ ಅರೆಸ್ಟ್

 

error: Content is protected !!
Scroll to Top