ಅನುಮಾನದ ಭೂತ…!!!! ➤  ಬೇಸತ್ತ ಹೆಂಡತಿ, ಮಗಳು  ಆತ್ಮಹತ್ಯೆಗೆ ಶರಣು

(ನ್ಯೂಸ್ ಕಡಬ)newskadaba.com  ಹುಬ್ಬಳ್ಳಿ, ಜ.07.  ಕೆರೆಯಲ್ಲಿ ತಾಯಿ ಮಕ್ತುಂಬಿ (38),ಮಗಳು ಸೈನಾಜ್ ( 16) ಎಂಬುವವರು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. ಶವ ನೋಡಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಇನ್ನು ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂದೆ ತಾಯಿ ಮಗಳನ್ನ ಕಳೆದುಕೊಂಡು‌ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಇಬ್ಬರ ಸಾವಿಗೆ ಮಕ್ತುಂಬಿ ಗಂಡನೇ ಕಾರಣ, ಯಾವಾಗಲೂ ಅನುಮಾನ ಪಡುತ್ತಿದ್ದ, ಅವನೇ ಕೊಲೆ ಮಾಡಿ ಕೆರೆಗೆ ಬೀಸಾಕಿದ್ದಾನೆ ಎಂದು ಮಕ್ತುಂಬಿ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಮಾಬುಸಾಬ್ ಹಾಗೂ ಮಕ್ತುಂಬಿ ಕಳೆದ 20 ವರ್ಷಗಳ ಹಿಂದೆಯೇ ಮದುವೆಯಾಗಿದ್ದರು. ಮದುವೆ ಆದ ದಿನದಿಂದಲೇ ಮಾಬುಸಾಬ್ ತನ್ನ ಹೆಂಡತಿ ಮೇಲೆ ಅನುಮಾನ ಪಡುತಿದ್ದನಂತೆ. ಹೆಂಡತಿ ಅಷ್ಟೆ ಅಲ್ಲ ತನ್ನ ಮಕ್ಕಳ ಮೇಲೂ ಆತನಿಗೆ ಅನುಮಾನ.ಎಲ್ಲಾದರೂ ಹೋದರೆ ನಿತ್ಯ ಕಿರಿಕಿರಿ ನೀಡುತ್ತಿದ್ದ. ಹೊಲದಲ್ಲಿ ಕೆಲಸ‌ ಮಾಡಕೊಂಡಿದ್ದ ಮಾಬುಸಾಬ್ ತನ್ನ ಹೆಂಡತಿ ಮಕ್ಕಳು ಮನೆಯಿಂದ ಹೊರಹೋದರು ಅನುಮಾನದ ದೃಷ್ಟಿಯಿಂದ ನೋಡಿ ಒಂದಲ್ಲ ಒಂದು ಖ್ಯಾತೆ ತಗೆದು ನಿತ್ಯವೂ ಮನೆಯಲ್ಲಿ ಜಗಳ ಮಾಡುತ್ತಿದ್ದನಂತೆ‌. ಇದು ವಿಕೋಪಕ್ಕೆ ಹೋಗಿ ಕಳೆದ ಮೂರು ದಿನಗಳ ಹಿಂದೆ ಮನೆಯಲ್ಲಿ ದೊಡ್ಡ ಗಲಾಟೆಯಾಗಿದೆ. ಇದರಿಂದ ಬೇಸತ್ತು ತಾಯಿ ಹಾಗೂ ಮಗಳು ಸೈನಾಜ್ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.

Also Read  ಸರ್ಕಾರಿ ಕೋಟಾದಡಿ ಓದಿ ವೈದ್ಯೆಯಾದ ಅಮೆರಿಕ ಪ್ರಜೆ ➤ ಹೈಕೋರ್ಟ್ ನಿಂದ ಹಿಗ್ಗಾಮುಗ್ಗಾ ತರಾಟೆ

 

error: Content is protected !!
Scroll to Top