ಮೀನುಗಾರಿಕೆಯ ವೇಳೆ ಸಮುದ್ರ ನೀರಿಗೆ ಬಿದ್ದು ವಿಟ್ಲ ಮೂಲದ ವ್ಯಕ್ತಿ ಮೃತ್ಯು

(ನ್ಯೂಸ್ ಕಡಬ) newskadaba.com ಕಾಪು, ಜ. 06. ಮೀನುಗಾರಿಕೆ ನಡೆಸಿ ಹಿಂತಿರುಗುತ್ತಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು ನಾಪತ್ತೆಯಾಗಿದ್ದ ವಿಟ್ಲ ಮೂಲದ ಮೀನುಗಾರನ ಮೃತದೇಹವು ಕಾಪು ಸಮುದ್ರ ತೀರದಲ್ಲಿ ಪತ್ತೆಯಾಗಿದೆ.

ಮೃತರನ್ನು ವಿಟ್ಲ ಪೆರುವಾಯಿ ಮೂಲದ ಆನಂದ ಎಂದು ಗುರುತಿಸಲಾಗಿದೆ. ಇವರು ಜ. 04 ರಂದು ಮಂಗಳೂರು ಬಂದರಿನಿಂದ ಮೀನುಗಾರಿಕೆಗೆ ಹೋಗಿ ವಾಪಸ್ಸಾಗುತ್ತಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಸಮುದ್ರದ ನೀರಿಗೆ ಬಿದ್ದು ನಾಪತ್ತೆಯಾಗಿದ್ದರು. ಇದೀಗ ಅವರ ಮೃತದೇಹ ಪತ್ತೆಯಾಗಿದ್ದು, ಈ ಬಗ್ಗೆ ಮಾಹಿತಿ ತಿಳಿದು ಈಶ್ವರ್ ಮಲ್ಪೆ ಅವರು ಪ್ರತಾಪ್ ಪಡುಕೆರೆ ಅವರ ಜೊತೆಗೆ ತೆರಳಿ ಪರ್ಸಿನ್ ಬೋಟಿನವರ ಸಹಕಾರದೊಂದಿಗೆ ಮೃತದೇಹವನ್ನು ದಡಕ್ಕೆ ಎಳೆದು ತಂದಿದ್ದಾರೆ‌.

Also Read  ಮಂಗಳೂರು: ಗಾಂಜಾ ಮಾರಾಟ ಆರೋಪಿಯ ಸೆರೆ ► 7,000 ರೂ. ಮೌಲ್ಯದ ಗಾಂಜಾ ವಶಕ್ಕೆ ಪಡೆದ ಪೊಲೀಸರು..!!!

error: Content is protected !!
Scroll to Top