ಸಾಲ ತೀರಿಸಲಾಗದೇ ಒಂದೇ ಕುಟುಂಬದ ಮೂವರು ಆತ್ಮಹತ್ಯೆ..!!

(ನ್ಯೂಸ್ ಕಡಬ) newskadaba.com ತಿರುವನಂತಪುರಂ, ಜ. 06. ಒಂದೇ ಕುಟುಂಬದ ಮೂವರು ಬೆಂಕಿ ಹಚ್ಚಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಿರುವನಂತಪುರಂ ನಲ್ಲಿ ವರದಿಯಾಗಿದೆ.


ಆತ್ಮಹತ್ಯೆ ಮಾಡಿಕೊಂಡವರನ್ನು ರಮೇಶ (48), ಪತ್ನಿ ಸುಲಜಾ ಕುಮಾರಿ (46) ಮತ್ತು ಪುತ್ರಿ ರೇಷ್ಮಾ (23) ಎಂದು ಗುರುತಿಸಲಾಗಿದೆ. ರಮೇಶನ್ ಎಂಬವರು ವಿವಿಧ ಉದ್ದೇಶಗಳಿಗಾಗಿ ಖಾಸಗಿ ವ್ಯಕ್ತಿಗಳಿಂದ 12 ಲಕ್ಷ ರೂ. ಸಾಲ ಮಾಡಿದ್ದು, ಬಡ್ಡಿ ಸೇರಿ 40 ಲಕ್ಷ ರೂಪಾಯಿ ಕಟ್ಟುವಂತೆ ಒತ್ತಾಯಿಸಲಾಗಿತ್ತು. ಆಸ್ತಿ, ಮನೆ ಮಾರಿ ಸಾಲ ತೀರಿಸಲು ಯತ್ನಿಸಿದರೂ  ಸಾಲ ತೀರಿಸಲಾಗದೇ ಕುಟುಂಬ ಆತ್ಮಹತ್ಯೆ ಮಾಡಿಕೊಂಡಿದೆ.

 

Scroll to Top