ಬೆಳ್ತಂಗಡಿ : ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ      ➤ ಗರ್ಭಪಾತ ಮಾಡಿಸಿದ ಆರೋಪದಡಿ ನಾಲ್ವರ ವಿರುದ್ದ ದೂರು ದಾಖಲು…!!!            

(ನ್ಯೂಸ್ ಕಡಬ) newskadaba.com    ಬೆಳ್ತಂಗಡಿ, ಜ.05. ಬಾಲಕಿ ಮೇಲೆ ನೆರೆಮನೆಯ ಯುವಕನೋರ್ವ ಲೈಂಗಿಕ ದೌರ್ಜನ್ಯ ನಡೆಸಿದ್ದಲ್ಲದೇ, ಆಕೆ ಗರ್ಭವತಿಯಾಗಿರುವುದನ್ನು ತಿಳಿದು, ಗರ್ಭಪಾತ ಮಾಡಿಸಿದ ಆರೋಪದಡಿ ನಾಲ್ವರ ವಿರುದ್ದ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ವರದಿ ತಿಳಿಸಿದೆ. ಮಕ್ಕಳ ಕಲ್ಯಾಣ ಸಮಿತಿಯವರು ನೀಡಿದ ದೂರಿನ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಸುಧೀರ್, ಪಾರ್ವತಿ, ಮನೋಹರ್, ಮಾದು ಎಂಬವರು ಈ ಆರೋಪಕ್ಕೆ ಬಳಗಾಗಿದ್ದಾರೆ ಎನ್ನಲಾಗಿದೆ.

ನೊಂದ ಬಾಲಕಿ ಶಾಲಾ ರಜಾ ದಿನಗಳಲ್ಲಿ ಸುಧೀರ್ ಎಂಬಾತನ ಮನೆಗೆ ಆಗಾಗ ಟಿ.ವಿ ನೋಡಲು ಹೋಗುತ್ತಿದ್ದು, ಆತ ಆಕೆಯನ್ನು ತನ್ನ ಅಜ್ಜಿ ಮನೆಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿ, ಈ ವಿಚಾರ ಯಾರಿಗೂ ಹೇಳದಂತೆ ಬೆದರಿಸಿ ಪದೇ ಪದೇ ಅತ್ಯಾಚಾರವೆಸಗುತ್ತಿದ್ದ ಎಂದು ಆರೋಪಿಸಲಾಗಿದೆ. ಬಾಲಕಿ ಗರ್ಭವತಿ ಆಗುತ್ತಿದ್ದಂತೆ ಈ ವಿಚಾರವನ್ನು ತಿಳಿದ ಆರೋಪಿ ಮತ್ತು ಇತರರು ಆಕೆಯನ್ನು ಕಾರಿನಲ್ಲಿ ಕರೆದುಕೊಂಡು ಹೋಗಿ ಆಸ್ಪತ್ರೆಯಲ್ಲಿ ಗರ್ಭಪಾತ ಮಾಡಿಸಿರುವುದಾಗಿ ತಿಳಿದುಬಂದಿದೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ಮೇಲೆ ಪೋಕ್ಸೊ ಸಹಿತ ಇತರ ಪ್ರಕರಣ ದಾಖಲಾಗಿದೆ ಎಂದು ವರದಿ ತಿಳಿಸಿದೆ.

Also Read  ವಿಪರೀತ ಮಳೆಗೆ ಪೊಲೀಸ್ ಠಾಣೆಯ ವಸತಿ ಗೃಹದ ತಡೆಗೋಡೆ ಕುಸಿತ

 

 

error: Content is protected !!
Scroll to Top