(ನ್ಯೂಸ್ ಕಡಬ) newskadaba.com ಡಿ.07. ಬಸ್ಸು ಮತ್ತು ಕಂಟೈನರ್ ಲಾರಿ ನಡುವೆ ಢಿಕ್ಕಿ ಸಂಭವಿಸಿ ಲಾರಿ ಕಾರೊಂದಕ್ಕೆ ಢಿಕ್ಕಿಯಾಗಿ ಉಂಟಾದ ಸರಣಿ ಅಪಘಾತದಲ್ಲಿ ಮಹಿಳೆಯೋರ್ವರು ಮೃತಪಟ್ಟು 15 ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ನಗರದ ನಂತೂರು ಎಂಬಲ್ಲಿ ಗುರುವಾರದಂದು ಬೆಳಿಗ್ಗೆ ನಡೆದಿದೆ.
ಮೃತ ಮಹಿಳೆಯನ್ನು ಕವಿತಾ ಎಂದು ಗುರುತಿಸಲಾಗಿದೆ. ಬಿಕರ್ನಕಟ್ಟೆಯಿಂದ ಆಗಮಿಸುತ್ತಿದ್ದ ಬಸ್ ನಂತೂರು ಸರ್ಕಲ್ ನಲ್ಲಿ ಕಂಟೈನರ್ ಲಾರಿಗೆ ಢಿಕ್ಕಿ ಹೊಡೆದಿದ್ದು, ಢಿಕ್ಕಿಯ ರಭಸಕ್ಕೆ ಲಾರಿಯು ಕಾರೊಂದಕ್ಕೆ ಢಿಕ್ಕಿಯಾಗಿದೆ. ಇದರಿಂದಾಗಿ ಸುಮಾರು15 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಗಾಯಾಳುಗಳನ್ನು ನಗರದ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಕದ್ರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.