ಪುತ್ತೂರು : ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಕಾರು     ➤ ಪುಟ್ಟ ಮಗು ಸೇರಿ, ಇಬ್ಬರಿಗೆ ಗಾಯ                                   



(ನ್ಯೂಸ್ ಕಡಬ) newskadaba.com  ಪುತ್ತೂರು, ಜ.03. ರಸ್ತೆ ಬದಿ ರಾಶಿ ಹಾಕಿದ್ದ ವಿದ್ಯುತ್ ಕಂಬಕ್ಕೆ ಢಿಕ್ಕಿಯಾದ ಪರಿಣಾಮ ಮೂವರು ಗಾಯಗೊಂಡ ಘಟನೆ ಕುಂಬ್ರ ಕೆ.ಇ.ಬಿ ಕಛೇರಿ ಮುಂಭಾಗ ಸಂಭವಿಸಿದೆ.







ಸಾರೆಪುಣಿ ಮೂಲದ ಕುಟುಂಬವೊಂದು ಮಂಗಳೂರಿಗೆ ತೆರಳಿ ವಾಪಾಸಾಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಅಪಘಾತದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಪುಟ್ಟ ಮಗು ಸೇರಿ, ಇಬ್ಬರಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಗಾಯಾಳುಗಳನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿ ತಿಳಿಸಿದೆ.






 

 

error: Content is protected !!
Scroll to Top