ಆರೋಗ್ಯಕರ ಚರ್ಮಕ್ಕೆ ಬಳಸಿ ದಿ ಬೆಸ್ಟ್ ಫೇಸ್ ವಾಶ್

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ. 02.ಮುಖವನ್ನು ಸ್ವಚ್ಛವಾಗಿಟ್ಟುಕೊಳ್ಳುವುದರಿಂದ ಮೊಡವೆ, ಜಿಡ್ಡು, ಸುಕ್ಕುಗಳಂತಹ ಸಮಸ್ಯೆಗಳನ್ನು ದೂರ ಇಡಬಹುದು. ಸೂರ್ಯನ ಕಿರಣ ಹಾಗೂ ವಾತಾವರಣದ ಧೂಳುಗಳಿಂದ ಮುಖದ ಮೇಲೆ ಹಾನಿ ಉಂಟಾಗುವುದು ಸಹಜ.

 

ಅಂತಹ ಸಮಸ್ಯೆಗಳನ್ನು ಸುಲಭವಾಗಿ ನಿಯಂತ್ರಣದಲ್ಲಿಡಲು ಫೇಸ್ ವಾಶ್‍ಗಳು ಮುಖ್ಯವಾಗಿವೆ. ಚರ್ಮದ ಮೇಲೆ ಯಾವುದೇ ಹಾನಿ ಉಂಟುಮಾಡದೆ ಚರ್ಮವನ್ನು ಆರೋಗ್ಯಕರವಾಗಿ ಇಡುವ ಕೆಲವು ಫೇಸ್ ವಾಶ್‍ಗಳು ಇವೆ. ಮುಖ್ಯವಾಗಿ ಜೆಲ್ ರೂಪದ ಫೇಸ್ ವಾಶ್. ಇದು ಚರ್ಮದ ಆಳದಿಂದ ಸ್ವಚ್ಛಗೊಳಿಸಿ, ಆಕರ್ಷಕ ಹೊಳಪನ್ನು ನೀಡುವುದು. ಮುಖದಲ್ಲಿ ಇರುವ ಜಿಡ್ಡು ಮತ್ತು ಕೊಳೆಗಳು ಇರದಂತೆ ಮಾಡುವುದು. ಇದರಿಂದ ಚರ್ಮದ ಮೇಲೆ ಮೊಡವೆ, ಬಿಳಿ ಚುಕ್ಕೆ, ಕಪ್ಪು ಚುಕ್ಕೆ ಸೇರಿದಂತೆ ಇನ್ನಿತರ ಸಮಸ್ಯೆಯನ್ನು ತೊಡೆದು ಹಾಕಲು ಸಹಾಯ ಮಾಡುವುದು. ಜೊತೆಗೆ ಚರ್ಮಕ್ಕೆ ಆರೋಗ್ಯಕರವಾದ ಹೊಳಪನ್ನು ನೀಡುತ್ತದೆ.

Also Read  ಫೆ. 17ಕ್ಕೆ 2023-24ನೇ ಸಾಲಿನ ರಾಜ್ಯ ಬಜೆಟ್‌ ಮಂಡನೆ ➤ ರಾಜ್ಯ ಸರ್ಕಾರ

 

error: Content is protected !!
Scroll to Top