ಕಾಸರಗೋಡಿನ ಕಾರು ಹಾವೇರಿಯಲ್ಲಿ ಅಪಘಾತ ಪ್ರಕರಣ ➤ ಮೃತರ ಸಂಖ್ಯೆ ನಾಲ್ಕಕ್ಕೇರಿಕೆ

(ನ್ಯೂಸ್ ಕಡಬ) newskadaba.com ಕಾಸರಗೋಡು, ಜ. 01. ಹಾವೇರಿಯಲ್ಲಿ ನಡೆದ ಕಾರು ಹಾಗೂ ಬಸ್ ನಡುವಿನ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ ನಾಲ್ಕಕ್ಕೇರಿದೆ.


ಮೃತ ಮಗುವನ್ನು ಕಾಸರಗೋಡು ತಲಂಗರೆ ನುಸ್ರತ್ ನಗರದ ಸಿಯಾದ್ -ನಿಷಾನ್ ದಂಪತಿ ಪುತ್ರಿ ಇಸಾ ಮರಿಯಂ (2) ಎಂದು ಗುರುತಿಸಲಾಗಿದೆ. ಸಿಯಾದ್ ನ ತಂದೆ ಮುಹಮ್ಮದ್ (65) ಹಾಗೂ ತಾಯಿ ಆಯಿಶಾ (62) ಸ್ಥಳದಲ್ಲೇ ಮೃತಪಟ್ಟರೆ, ಇನ್ನೋರ್ವ ಮಗು ಮುಹಮ್ಮದ್ ಕಳೆದ ದಿನ ಮೃತಪಟ್ಟಿದ್ದನು. ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಎರಡು ವರ್ಷದ ಇಸಾ ಮರಿಯಂ ಇದೀಗ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಇದರಿಂದ ಒಂದೇ ಕುಟುಂಬದ ನಾಲ್ವರು ಈ ಅಪಘಾತಕ್ಕೆ ಬಲಿಯಾದಂತಾಗಿದೆ.

Scroll to Top