ಕ್ಷುಲ್ಲಕ ಕಾರಣಕ್ಕೆ ಬಸ್ ಚಾಲಕ ಮತ್ತು ನಿರ್ವಾಹಕನಿಗೆ ಮನಬಂದಂತೆ ಥಳಿಸಿದ ಬೈಕ್ ಸವಾರ 

(ನ್ಯೂಸ್ ಕಡಬ) newskadaba.com ಕಾರವಾರ, ಡಿ. 31. ಕ್ಷುಲ್ಲಕ ಕಾರಣಕ್ಕೆ ಅಪರಿಚಿತ ಬೈಕ್ ಸವಾರನೋರ್ವ ಕೆ.ಎಸ್.ಆರ್.ಟಿ.ಸಿ ಚಾಲಕ ಹಾಗೂ ನಿರ್ವಾಹಕನ ಮೇಲೆ ಮನಬಂದಂತೆ ಥಳಿಸಿ ಹಲ್ಲೆ ನಡೆಸಿರುವ ಘಟನೆ ಹೊನ್ನಾವರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66ರ ಕಾಸರಗೋಡು ಟೊಂಕಾ ಬಳಿ ಸಂಭವಿಸಿದೆ.

ಹಲ್ಲೆಗೊಳಗಾದವರನ್ನು ಬಸ್ ಚಾಲಕ ಕೃಷ್ಣ ನಾಯ್ಕ ಹಾಗೂ ನಿರ್ವಾಹಕ ಮರಿಯಪ್ಪ ಎಂದು ಗುರುತಿಸಲಾಗಿದೆ. ಹಲ್ಲೆ ನಡೆಸಿದ ಬೈಕ್ ಸವಾರನ ಕುರಿತು ಮಾಹಿತಿ ತಿಳಿದುಬಂದಿಲ್ಲ. ಕುಮಟಾದಿಂದ ಭಟ್ಕಳಕ್ಕೆ ತೆರಳುತ್ತಿದ್ದ ಬಸ್ ನಲ್ಲಿ ಕಾಸರಗೋಡು ಬಳಿ ಪ್ರಯಾಣಿಕರು ಇಳಿಯಬೇಕಾದ್ದರಿಂದ ಚಾಲಕ ಬಸ್ ನಿಲ್ಲಿಸಿದ್ದಾನೆ. ಈ ಸಂದರ್ಭ ಹಿಂಬದಿಯಿಂದ ಬರುತ್ತಿದ್ದ ಬೈಕ್ ಸವಾರ ಓವರ್ ಟೇಕ್ ಮಾಡಲು ಮುಂದಾಗಿದ್ದ ಎಂದು ತಿಳಿದುಬಂದಿದೆ. ಚಾಲಕ ಮತ್ತು ನಿರ್ವಾಹಕನನ್ನು ಬಸ್ ನಿಂದ ಹೊರಕ್ಕೆ ಎಳೆದೊಯ್ದು ಹಿಗ್ಗಾಮುಗ್ಗಾ ಥಳಿಸಿದ್ದಾನೆ ಎನ್ನಲಾಗಿದೆ.

Also Read  ಮಗಳ ವಿವಾಹ ದಿನದಂದೇ ತಂದೆ ಹೃದಯಾಘಾತದಿಂದ ಮೃತ್ಯು

 

error: Content is protected !!
Scroll to Top