ಮಂಗಳೂರು: ಬೀದಿನಾಯಿಗಳ ಅನ್ನಕ್ಕೆ ಸೀಮೆಎಣ್ಣೆ ಸುರಿದ ಮಹಿಳೆ..!

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 30.  ಮಹಿಳೆಯೊಬ್ಬರು ಬೀದಿನಾಯಿಗಳಿಗೆ ಹಾಕಲೆಂದು ತಯಾರಿಸಿದ್ದ ಅನ್ನಕ್ಕೆ ಪಕ್ಕದ ಮನೆಯ ಮಹಿಳೆ ಸೀಮೆಎಣ್ಣೆ ಸುರಿದ ದುರದೃಷ್ಟಕರ ಘಟನೆ ಮಂಗಳೂರಿನಲ್ಲಿ ನಡೆದಿದೆ.

 

ಮಂಗಳೂರಿನ ಬಳ್ಳಾಲ್‌ ಭಾಗ್ ನಿವಾಸಿ ರಜನಿ ಶೆಟ್ಟಿಯವರು ಸುಮಾರು 800 ಬೀದಿನಾಯಿಗಳಿಗೆ 60 ಕೆಜಿ ಅಕ್ಕಿಯಿಂದ ಅನ್ನ ತಯಾರಿಸಿಟ್ಟಿದ್ದರು. ಇದಕ್ಕೆ ಪಕ್ಕದ ಮನೆಯ ಮಹಿಳೆ ಸೀಮೆಎಣ್ಣೆ ಸುರಿದಿದ್ದು, ಇದರಿಂದ ಬೇಸರವಾಗಿದೆ ಎಂದು ರಜನಿ ಶೆಟ್ಟಿ ತಿಳಿಸಿರುವುದಾಗಿ ವರದಿಯಾಗಿದೆ. ಬೀದಿನಾಯಿಗಳಿಗೆ ಉಣ ಬಡಿಸುವುದನ್ನು ತಮ್ಮ ಕಾಯಕವಾಗಿ ಮಾಡಿಕೊಂಡಿರುವ ರಜನಿ ಶೆಟ್ಟಿಯವರು, ಸುಮಾರು 38 ಬೀದಿನಾಯಿಗಳು, ಬೆಕ್ಕು, ಗಿಡುಗ, ಕಾಗೆಗಳಿಗೆ ಮನೆಯಲ್ಲೇ ಆಶ್ರಯ ನೀಡಿ, ಪ್ರಾಣಿಗಳ ಆರೈಕೆಯನ್ನೂ ಮಾಡುತ್ತಾರೆ. ಬೀದಿನಾಯಿಗಳ ರೋಧನೆ ನೋಡಿದ ಇವರ ಮನಸ್ಸು ಕರಗಿ ಕಳೆದ ಎರಡೂವರೆ ದಶಕಗಳಿಂದ ಪ್ರತಿದಿನ 800 ನಾಯಿಗಳಿಗೆ 60 ಕೆಜಿ ಅಕ್ಕಿ ಬೇಯಿಸಿ ಅನ್ನ ತಯಾರು ಮಾಡಿ, ಕೋಳಿ ತ್ಯಾಜ್ಯವನ್ನು ಸೇರಿಸಿ ಪ್ರಾಣಿಗಳಿಗೆ ನೀಡುತ್ತಾರೆ ಎನ್ನಲಾಗಿದೆ.

Also Read  ನನೆಗುದಿಗೆ ಬಿದ್ದಿರುವ ಮರ್ದಾಳ ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರಸ್ತಾವನೆ

error: Content is protected !!
Scroll to Top